ADVERTISEMENT

ಪ್ರಸಾದದ ಮಹಿಮೆ

ಶ್ರೀನಿವಾಸ ಜಾಲವಾದಿ
Published 30 ಜನವರಿ 2019, 20:21 IST
Last Updated 30 ಜನವರಿ 2019, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಯಾ ಓಡೋಡುತ್ತಾ ಬಂದ, ‘ಏ ಬಾರಲೇ, ಪೂಜಾರಿ ಕರಿಲಿಕತ್ತಾನ’ ಅಂತ ಅಂದ.
‘ಯಾಕೆ’ ಅಂದೆ,

‘ಏ ಮಂಗಳಾರತಿ ಆಗ್ತಾ ಐತಿ ಬಾ’,
‘ಮಂಗಳಾರತಿ ಆದಮ್ಯಾಲ?’

‘ಎಂಥ ಹುಚ್ಚಪ್ಯಾಲಿ ಇದ್ದಿಯಲೇ, ಮಂಗಳಾರತಿ ಆದಮ್ಯಾಲ ಧೂಪಾರತಿ ಮಾಡ್ತಾರೇನ್, ಪ್ರಸಾದ ಕೊಡ್ತಾರಲೇ ಮಸ್ತ, ಭಾರಿ ಘಮ ಬರಕತೈತಿ’ ಅಂದ ಗುಂಡ್ಯಾ.

ADVERTISEMENT

‘ಏ ಪ್ರಸಾದ ಗಿಸಾದ ಏನೂ ಬ್ಯಾಡಪ ಅಂದೆ’. ‘ಹೌದ್ರಿ ಪ್ರಸಾದೇನ್ ಬ್ಯಾಡ್ರಿ. ಬರೆ ಮಂಗಳಾರತಿ ತೊಗೊಂಡು ಹೋಗುನು. ಪ್ರಸಾದ ಬೇಕಂದ್ರ ಮನ್ಯಾಗ ಹೋಗಿ ಮಾಡ್ಕೊಂಡು ತಿನ್ನೂನು’ ಅಂದಳು ಅರ್ಧಾಂಗಿ.

‘ಯಾಕ್ ಯಾಕ್ರಿಪ ಏನಾಯ್ತ್ ನಿಮ್ಗೆಲ್ಲಾ’ ಅಂತ ಹೌಹಾರಿದ ಗುಂಡ್ಯಾ, ‘ಎಲ್ಲಾರೂ ಒಂದ್ ನಮೂನಿ ಮಾಡ್ಲಿಕತ್ತೀರೆಲಾ’ ಅಂದ.

‘ಹೌದೇಳ್ರಿ ಕಾಕಾ, ನಮಗೇನ್ ಪ್ರಸಾದ ಬ್ಯಾಡೇ ಬ್ಯಾಡ’ ಅಂದ್ಳು ನಮ್ಮ ಜೊತೆಗಿದ್ದ ಡುಮ್ಮಕ್ಕ.

‘ಏ ಬ್ಯಾಡೇಳಪ ಗುಂಡ್ಯಾ, ಪ್ರಸಾದೇನ್ ಬ್ಯಾಡೇಳಪ. ಸುಮ್ನೆ ಯಾಕ ನಮ್ ತಲಿ ತಿನ್ನಾಕತ್ತಿದಿ ನೀನು. ಆ ಪ್ರಸಾದ ಒಯ್ದು ಮನ್ಯಾಗ ಗುಂಡಿಗಿ ಕೊಡು’, ಅಂದೆ.

‘ಯಾಕ್ರಿ ವೈನಿಯವ್ರೆ ಏನಾಯ್ತು? ಯಾಕ ಗಾಬರಿ ಆಗಿರಲ್ಲ. ಚೊಲೊ ಪ್ರಸಾದ ಮಾಡ್ಯಾರ ರೀ. ತುಪ್ಪ, ಗೋಡಂಬಿ ಹಾಕಿ ಘಮ ಘಮ ವಾಸನ ಬರಾಕತ್ತೈತಿ. ಯಾಕ ವಲ್ಲ ಅಂತೀರಲ್ಲ ಎಲ್ಲರೂ. ದೇವರ ಪ್ರಸಾದ ತಿನ್ರಿ, ದೇವರು ಚೊಲೊತ್ನ್ಯಾಗೆ ಆಶೀರ್ವಾದ ಮಾಡ್ತಾನ’ ಅಂತ ಹೇಳಿದ ಗುಂಡ್ಯಾ.

‘ಈ ಗುಡ್ಯಾಗ ಪ್ರಸಾದ ಟೆಸ್ಟಿಂಗ್ ಕಮಿಟಿ ಐತೇನ್ರಿ’ ಅಂತ ಕೇಳಿದ್ಳು ಡುಮ್ಮಕ್ಕ. ‘ಯಾಕ’ ಅಂದ, ‘ಯಾಕಂತ ಕೇಳ್ತಿಯೇನ್ಲೆ. ಮೊನ್ನೆ ಕೇಳಿದಿಲ್ಲ ಪ್ರಸಾದದ ಮಹಿಮಾ’ ಅಂತ ನಾ ಅನ್ನೂದಕ್ಕ, ಎಲ್ಲ ಮಂದಿ ‘ಪ್ರಸಾದ’ ‘ಪ್ರಸಾದ’ ಅಂತ ಕೂಗುತ್ತಾ ದಿಕ್ಕಾಪಾಲಾಗಿ ಓಡತೊಡಗಿದರು. ಅದನ್ನ ನೋಡುತ್ತಾ ಗುಂಡ್ಯಾ ಗಾಬರಿ ಆಗಿ ಅಲ್ಲೇ ನಿಂತುಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.