ADVERTISEMENT

ಚುರುಮುರಿ: ಚಿಲ್ಡ್ರನ್ಸ್ ಡೇ...

ಚುರುಮುರಿ

ಗುರು ಪಿ.ಎಸ್‌
Published 15 ನವೆಂಬರ್ 2023, 19:34 IST
Last Updated 15 ನವೆಂಬರ್ 2023, 19:34 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಹ್ಯಾಪಿ ಚಿಲ್ಡ್ರನ್ಸ್ ಡೇ’ ಮುದ್ದಣ್ಣಂಗೆ ವಿಶ್ ಮಾಡಿದ ವಿಜಿ.

‘ಏನ್ ಸರ್ ಇದು, ಮಕ್ಕಳ ದಿನ ಆಚರಿಸಿ ಎರಡು ದಿನ ಆಯ್ತು, ಅದರಲ್ಲೂ ನನಗ್ಯಾಕೆ ವಿಶ್ ಮಾಡ್ತಿದೀರಿ?’

ADVERTISEMENT

‘ನಿಮ್ಮಂಥ ಪೊಲಿಟೀಷಿಯನ್ಸ್‌ಗೆ ಪ್ರತಿದಿನವೂ ಮಕ್ಕಳ ದಿನವೇ ಅಲ್ವಾ ಮುದ್ದಣ್ಣ, ಅದಕ್ಕೆ ವಿಶ್ ಮಾಡಿದೆ’ ನಗುತ್ತಾ ಹೇಳಿದ ವಿಜಿ. 

‘ಮಕ್ಕಳ ಬದುಕು-ಭವಿಷ್ಯದ ಬಗ್ಗೆ ಯಾವ ತಂದೆ-ತಾಯಿಗೆ ಚಿಂತೆ ಇರಲ್ಲ ಹೇಳಿ ಸರ್, ಅವರವರ ‘ಸ್ಟೇಟಸ್’ ಅನುಸಾರ ಮಕ್ಕಳಿಗೆ ಪದವಿ-ಅಧಿಕಾರ ಕೊಡಿಸ್ತಾರೆ, ಅಷ್ಟಕ್ಕೂ ನಾವು ಮಾತ್ರವಾ ಮಕ್ಕಳ ದಿನ ಸೆಲಬ್ರೇಟ್ ಮಾಡ್ತಿರೋದು, ಬೇರೆ ಪಕ್ಷದವರೂ ಮಾಡ್ತಿಲ್ವ’.

‘ನೀವಷ್ಟೇ ಅಂತ ನಾನೆಲ್ಲಿ ಹೇಳಿದೆ? ಅವರು ಡಾಟರ್ಸ್ ಡೇ, ಗ್ರ್ಯಾಂಡ್‌ಸನ್ಸ್‌ ಡೇ ಮಾಡಿದ್ರೆ, ಇವರೂ ಸನ್ಸ್‌ ಡೇ, ಗ್ರ್ಯಾಂಡ್‌ಸನ್ಸ್‌ ಡೇ, ಡಾಟರ್‌ ಇನ್ಲಾಸ್‌ ಡೇ ಎಲ್ಲ ಮಾಡಿದ್ರಲ್ಲ’.

‘ಹೌದು ಮತ್ತೆ, ಒಗ್ಗಟ್ಟೇ ನಮ್ಮ ಮೂಲ ಮಂತ್ರ’ ಸಮರ್ಥಿಸಿಕೊಂಡ ಮುದ್ದಣ್ಣ.

‘ನಿಮ್ ನಿಮ್ ಮಕ್ಕಳು, ಮೊಮ್ಮಕ್ಕಳು, ಅಣ್ಣಂದಿರು, ತಮ್ಮಂದಿರ ದಿನವನ್ನೇ ಆಚರಿಸ್ತಾ ಕೂತ್ಕೊಂಡ್ರೆ, ಪಕ್ಷಕ್ಕಾಗಿ ದುಡಿದ ಈ ಭಾರತ ಮಾತೆಯ ಮಕ್ಕಳು, ಕರ್ನಾಟಕ ಮಾತೆಯ ಮಕ್ಕಳ ಗತಿಯೇನು? ಅವರ ಭವಿಷ್ಯ ಏನು?’ ಆತಂಕದಲ್ಲಿ ಕೇಳಿದ ವಿಜಿ.‌

‘ಯಾಕ್ ಸರ್ ಇಷ್ಟು ಚಿಂತಾಕ್ರಾಂತರಾಗಿ ಕೇಳ್ತಿದೀರಿ, ಎಲ್ಲರಿಗೂ ಒಂದಲ್ಲ ಒಂದಿನ ಬಂದೇ ಬರುತ್ತೆ. ನಾವೆಲ್ಲ ಮಕ್ಕಳ ದಿನ ಒಂದನ್ನೇ ಆಚರಿಸಲ್ವಲ್ಲ, ಬೇರೆ ಬೇರೆ ದಿನಗಳನ್ನೂ ಸೆಲಬ್ರೇಟ್ ಮಾಡ್ತೀವಲ್ಲ’.

‘ಏಪ್ರಿಲ್ 1ಕ್ಕೆ ಆಚರಿಸ್ತೀವಲ್ಲ, ಅದಾ?’ ವಿಜಿ ಮಾತಿಗೆ ನಗತೊಡಗಿದ ಮುದ್ದಣ್ಣ, ‘ಹೋಗ್ಲಿ ಬಿಡಿ ಸರ್, ಇದೇ ಸಂಡೆ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಇದೆ‌. ಸ್ಟೇಡಿಯಂಗೆ ಹೋಗಿ ನೋಡ್ಕೊಂಡು ಬರೋಣ ಬನ್ನಿ’.

‘ನೋಡಿ, ಈಗ ಕ್ರಿಕೆಟ್ ಆಡಳಿತದಲ್ಲೂ ‘ಸನ್ ಡೇ’ ಇಬ್ಬರೂ ನಗಲಾರಂಭಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.