ADVERTISEMENT

ಚುರುಮುರಿ: ಮಿಷನ್ ಕಮಿಷನ್!

ಗುರು ಪಿ.ಎಸ್‌
Published 19 ಏಪ್ರಿಲ್ 2022, 19:33 IST
Last Updated 19 ಏಪ್ರಿಲ್ 2022, 19:33 IST
Churumuri==20042022
Churumuri==20042022   

ಮಿನಿಸ್ಟರ್ ವಿಜಿಗೆ ತುಂಬಾ ಕ್ಲೋಸ್ ಇರೋ ಒಬ್ರ ಮುಂದೆ ನಿಂತ ಮುದ್ದಣ್ಣ, ‘ನಿಮ್ಮ ಸಚಿವರ ಅಡ್ವೈಸರ್ ಪೋಸ್ಟ್‌ಗೆ ನನ್ನ ಹೆಸರು ರೆಕ್ಮಂಡ್ ಮಾಡಿ ಸರ್’ ಎಂದು ಬೇಡಿಕೊಂಡ.

‘ನೀನು ಅಡ್ವೈಸರ್ ಆದ್ರೆ ನಂಗೇನ್ ಲಾಭ’ ಕೇಳ್ದ ಆ ವ್ಯಕ್ತಿ.

‘ಪ್ರತೀ ತಿಂಗಳೂ ನನ್ನ ಸ್ಯಾಲರೀಲಿ ನಿಮ್ಗೆ 20 ಪರ್ಸೆಂಟ್ ಕಮಿಷನ್...’

ADVERTISEMENT

ವಾರದಲ್ಲೇ ಆಫರ್ ಲೆಟರ್ ಬಂತು.

ಕೆಲವೇ ದಿನಗಳಲ್ಲಿ ಮಿನಿಸ್ಟರ್ ವಿಜಿಗಿಂತ ಅಡ್ವೈಸರ‍್ರೇ ಫೇಮಸ್ ಆಗಿಬಿಟ್ಟ.

‘ಏನ್ ಮುದ್ದಣ್ಣ, ನಿಮ್ಮ ಮಿನಿಸ್ಟರ್ ಈಗ ನನ್ನ ಕೈಗೇ ಸಿಗ್ತಿಲ್ಲ, ಒಂದ್ ಇಂಪಾರ್ಟೆಂಟ್ ಕೆಲಸ ಇತ್ತು ಮಾಡಿಸಿಕೊಡು’ ಕೇಳ್ದ ಆ ‘ರೆಕ್ಮಂಡ್’ ಮನುಷ್ಯ.

‘30% ಕಮಿಷನ್ ಕೊಟ್ಟರೆ ನಿಮ್ಮ ಕೆಲಸ ಆಗುತ್ತೆ...’ ಮುದ್ದಣ್ಣನ ವರಸೆ ಕಂಡು ಆ ವ್ಯಕ್ತಿಯ ಪಿತ್ತ ನೆತ್ತಿಗೇರಿತು. ಅದನ್ನು ತೋರಗೊಡದೆ ಹಲ್ಲು ಗಿಂಜಿ ಕಮಿಷನ್ ದುಡ್ಡು ಕೊಟ್ಟು ಹೊರಟ.

ಮುದ್ದಣ್ಣನ ಚಾಕಚಕ್ಯತೆ, ಅವನು ಎಲ್ಲದ
ರಲ್ಲೂ ಕಮಿಷನ್ ಹೊಡೆಯುವ ಪರಿ, ಮೇಲೇರಿ
ಸಿದವರನ್ನೇ ಕೆಳಗಿಳಿಸುವ ವೈಖರಿಯ ಬಗ್ಗೆ ‘ರಾಜ
ಕೀಯ ಪಡಸಾಲೆ’ಯಲ್ಲಿ ಮೆಚ್ಚುಗೆಯ ಮಾತು
ಗಳು ಕೇಳಿಬರಲಾರಂಭಿಸಿದವು.

‘ಇಂಥ ಅಡ್ವೈಸರ್ ನಮಗೂ ಸಿಗಬಾರದಾ’ ಎಂದು ಉಳಿದ ಮಿನಿಸ್ಟರ್‌ಗಳು ಕೈ ಕೈ ಹಿಸುಕಿ
ಕೊಳ್ಳತೊಡಗಿದರು.

ಮಂತ್ರಿ ಆಗಬೇಕೆಂಬ ಮಹದಾಸೆ ಹೊಂದಿದ್ದ ಎಮ್ಮೆಲ್ಲೆ ಒಬ್ರು ಮುದ್ದಣ್ಣನನ್ನ ಭೇಟಿಯಾದರು‌.

‘ನಾನು ಮಂತ್ರಿಯಾಗ್ಬೇಕು’

‘ಎಲ್ಲದರಲ್ಲೂ 40% ಕಮಿಷನ್ ಕೊಟ್ಟರೆ ಆಗ್ತೀರ...’

‘ಡನ್’

‘ಮಿಷನ್ ಕಮಿಷನ್’ ಪ್ರಾರಂಭವಾಯಿತು. ವಿಜಿ ಏನು ಹೇಳಿದರೂ ಕಾಂಟ್ರವರ್ಸಿ ಆಗತೊಡ
ಗಿತು. ಹಾಗೆ ಮುದ್ದಣ್ಣನೇ ಮಾಡತೊಡಗಿದ.

ವಿಜಿ ಮಂತ್ರಿಗಿರಿ ಹೋಯಿತು‌. 40 ಪರ್ಸೆಂಟ್ ಆಶ್ವಾಸನೆಯ ಎಮ್ಮೆಲ್ಲೆ ಈಗ ಹೊಸ ಮಿನಿಸ್ಟರ್‌. ಮುದ್ದಣ್ಣನೇ ಅವನಿಗೆ ಅಡ್ವೈಸರ್!

ಹಳೇ ಮಿನಿಸ್ಟರ್ ಒಬ್ರು ಬಂದು ಮುದ್ದಣ್ಣನ ಮುಂದೆ ನಿಂತರು.

‘ನಾನು ಸೀಎಂ ಆಗಬೇಕು... ’

‘50 ಪರ್ಸೆಂಟ್‌ಗೆ ಓಕೆ ಅಂದ್ರೆ ನೀವೇ ಮುಖ್ಯಮಂತ್ರಿ...’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.