ADVERTISEMENT

ಚುರುಮುರಿ: ಮರಳಿ ಮನೆಗೆ!

ಗುರು ಪಿ.ಎಸ್‌
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

‘ನಾ ಬಂದೆ, ನಾ ಬಂದೆ’ ಖುಷಿಯಿಂದ ಒಳಬಂದ ಮುದ್ದಣ್ಣ. 

‘ದೆಹಲಿಗೆ ಹೋಗಿ ಬಂದಾಗೊಮ್ಮೆ ಬೇರೆ ಬೇರೆ ಕಲರ್‌ ಶರ್ಟ್‌ ಹಾಕ್ಕೊಂಡು ಬರ್ತೀಯಲ್ಲಣ್ಣ. ಕಲರ್‌ಫುಲ್‌ ಪೊಲಿಟೀಷಿಯನ್‌ ಬಿಡಣ್ಣ ನೀನು’ ಹೊಗಳತೊಡಗಿದ ಪಿಎ ವಿಜಿ. 

ADVERTISEMENT

‘ನಾವೆಲ್ಲಿ ಇರ್ತೀವೋ ಅಲ್ಲಿ ನಮ್ಮತನ ತೋರಿಸಬೇಕು ವಿಜಿ, ಅದೇ ಸಂಸ್ಕಾರ, ಸಂಸ್ಕೃತಿ’.

‘ಅಣ್ಣಾ, ಈ ಪಾರ್ಟಿಗೆ ಬರೋದು ಗ್ಯಾರಂಟಿ ಅಂದ್ಮೇಲೆ ಆ ಪಾರ್ಟಿಗೇಕೆ ಹೋಗಿದ್ರಿ?’ 

‘ಬದಲಾವಣೆ ಜಗದ ನಿಯಮ. ಆಗ ನನಗೆ ಅವಮಾನವಾಗಿತ್ತು, ಗೌರವದಿಂದ ನಡೆಸಿಕೊಂಡಿರಲಿಲ್ಲ, ಅದಕ್ಕೆ ಹೊರಹೋಗಿದ್ದೆ’.

‘ಈಗ ಗೌರವ ವಾಪಸ್‌ ಕೊಟ್ರಾ ಅಣ್ಣ?’ 

‘ಕೊಡುತ್ತೇವೆ ಅಂತ ಹೇಳಿದ್ದಾರೆ. ನಾನ್ಯಾವಾಗಲೂ ಏನನ್ನೂ ಕೇಳುವವನಲ್ಲ. ಅದರಲ್ಲಿಯೂ ತ್ಯಾಗ ನನ್ನ ಹುಟ್ಟುಗುಣ’.

‘ಈಗೇನಣ್ಣ ತ್ಯಾಗ ಮಾಡಿದ್ರಿ?’

‘ಎಂಎಲ್‌ಸಿ ಸ್ಥಾನವನ್ನೇ ತ್ಯಾಗ ಮಾಡಿಲ್ವ’. 

‘ಯಾರಿಗಾಗಿ, ಯಾವುದಕ್ಕಾಗಿ ಇಂಥ ತ್ಯಾಗ?’ 

‘ದೇಶಕ್ಕಾಗಿ, ಪಕ್ಷಕ್ಕಾಗಿ’ ಎಂದು ಜೋರಾಗಿ ಹೇಳಿದ ಮುದ್ದಣ್ಣ, ‘ನನಗಾಗಿ, ನನ್ನ ಕುಟುಂಬಕ್ಕಾಗಿ’ ಎಂದು ಮನಸ್ಸಲ್ಲೇ ಗುನುಗಿಕೊಂಡ. 

‘ಈಗ ನಾನೇನು ಮಾಡಬೇಕಣ್ಣ?’

‘ಏನಿಲ್ಲ, ಆ ಭಾಷಣ ಬರೆದಿದ್ದ ಕಾಗದಗಳನ್ನೆಲ್ಲ ಬಿಸಾಕು.  ಹೊಗಳಬೇಕಾದವರು, ಬೈಯಬೇಕಾದವರ ಪಟ್ಟಿಯನ್ನು ಅದಲು ಬದಲು ಮಾಡು, ಸಿದ್ಧಾಂತವನ್ನೂ ಬದಲಿಸಿ ಭಾಷಣ ಬರೆದಿಡು’.

‘ಅಣ್ಣ, ಇ.ಡಿ, ಐ.ಟಿ, ಸಿಬಿಐನವರಿಗೆ ಬೈತಿದ್ರಲ್ಲ, ಅದನ್ನೂ ಬದಲಿಸಬೇಕಾ?’ 

‘ಹೌದು, ಆ ಸಾಲುಗಳನ್ನೆಲ್ಲ ಹೊಗಳಿಕೆಯ ಪಟ್ಟಿಯಲ್ಲಿಡು’.

‘ಅಣ್ಣ, ಲೋಕಸಭೆ ಚುನಾವಣೆಗೂ ಟಿಕೆಟ್‌ ಕೊಡದೆ, ನಿಮ್ಮ ಗೌರವವನ್ನು ವಾಪಸ್‌ ಕಸಿದುಕೊಂಡುಬಿಟ್ಟರೆ...?’ 

‘ನನ್ನನ್ನ ಯಾರು ಪ್ರಧಾನಿ ಮಾಡ್ತಾರೋ ಆ ಕಡೆ ನನ್ನ ಪಯಣ’.

‘ತಗೊಳಣ್ಣ, 28 ಬೇರೆ ಬೇರೆ ಕಲರ್‌ ಶರ್ಟ್‌ಗಳನ್ನ ತರಿಸಿದೀನಿ’ ಬಟ್ಟೆ ಚೀಲವನ್ನಿಟ್ಟು ಹೋದ ವಿಜಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.