ADVERTISEMENT

ಚುರುಮುರಿ: ಕಮಿಷನ್ ಕಂಪ್ಲೇಂಟ್

ಸಿ.ಎನ್.ರಾಜು
Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
ಚುರುಮುರಿ: ಕಮಿಷನ್ ಕಂಪ್ಲೇಂಟ್
ಚುರುಮುರಿ: ಕಮಿಷನ್ ಕಂಪ್ಲೇಂಟ್   

‘ಮೊದಲು 2-3ರಷ್ಟಿದ್ದ ಕಾಮಗಾರಿ ಪರ್ಸೆಂಟೇಜು 5-10ರಷ್ಟಾಗಿ, 20-30ಕ್ಕೆ ಹೆಚ್ಚಾಗಿ, ಈಗ 40 ಪರ್ಸೆಂಟಿಗೆ ಏರಿಕೆಯಾಗಿದೆಯಂತೆ ಕಣ್ರೀ...’ ಎಂದಳು ಅನು.

‘ಇರಬಹುದು. ಕಾಲ, ಆಳುವ ಪಕ್ಷ ಬದಲಾದಂತೆ ಪದಾರ್ಥಗಳ ಬೆಲೆ ಹೆಚ್ಚಾಗುವಂತೆ ಕಾಮಗಾರಿ ಕಮಿಷನ್ ದರವೂ ಏರುವುದು ಪ್ರಕೃತಿ ಸಹಜವೇನೋ...’ ಅಂದ ಗಿರಿ.

‘ಸ್ಕೂಲ್ ಮಕ್ಕಳು 40 ಪರ್ಸೆಂಟ್ ಪಡೆದರೆ ಪಾಸಾಗ್ತಾರೆ, 40 ಪರ್ಸೆಂಟ್ ಕೊಟ್ಟರೆ ಕಾಮಗಾರಿ ಫೇಲ್ ಆಗೋದಿಲ್ವೇನ್ರೀ? ಪಾಸಾಗಲು ಕಾಮಗಾರಿಗೆ ಸಪ್ಲಿಮೆಂಟರಿಯ ಅವಕಾಶವೂ ಇಲ್ಲ’.

ADVERTISEMENT

‘ಕಾಮಗಾರಿ ಮಾತ್ರವಲ್ಲ, ಗುತ್ತಿಗೆದಾರರೂ ಫೇಲ್ ಆಗಿಬಿಡ್ತಾರಂತೆ. ಚಿಲ್ಲರೆ ಹಣದಲ್ಲಿ ಕಳಪೆ ಕಾಮಗಾರಿ ಮಾಡಿದರೆ ಗುತ್ತಿಗೆದಾರರು ಹೆಸರು ಕೆಡಿಸಿಕೊಂಡು ಬ್ಲ್ಯಾಕ್‌ಲಿಸ್ಟ್ ಸೇರುವ ಅಪಾಯವೂ ಇದೆಯಂತೆ. ಕಮಿಷನ್ ಕಾಟ ತಪ್ಪಿಸಿ ಅಂತ ಗುತ್ತಿಗೆದಾರರು ಪ್ರಧಾನಿಯಿಂದ ವಿಪಕ್ಷ ನಾಯಕರವರೆಗೂ ಕಂಪ್ಲೇಂಟ್ ಕೊಟ್ಟಿದ್ದಾರಂತೆ’.

‘ಲೋಕಾಯುಕ್ತರಿಗೆ ದೂರು ಕೊಡಿ, ಇಲ್ಲವೆ ದಾಖಲೆ ಕೊಡಿ ನಾವೇ ಕ್ರಮ ತೆಗೆದುಕೊಳ್ತೀವಿ ಅಂತ ಸಿಎಂ ಹೇಳಿದ್ದಾರೆ’.

‘ದೂರು ಕೊಡಲು ಗುತ್ತಿಗೆದಾರರಿಗೆ ದಾಖಲಾತಿಗಳೇ ಸಿಗ್ತಿಲ್ಲವಂತೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.