ADVERTISEMENT

ನಾಡಕಚೇರಿ ವೆಬ್‍ಸೈಟ್‍: ಪರದಾಟ ತಪ್ಪಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಮಾರ್ಚ್ 2020, 15:58 IST
Last Updated 17 ಮಾರ್ಚ್ 2020, 15:58 IST

ನಾಡಕಚೇರಿ ವೆಬ್‍ಸೈಟ್ ಮೂಲಕ ಪಡಿತರ ಚೀಟಿ ಸಂಖ್ಯೆ ಬಳಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಪ್ರಮಾಣಪತ್ರಗಳನ್ನು ಆನ್‍ಲೈನ್ ಮುಖಾಂತರ ₹ 25 ಶುಲ್ಕ ಪಾವತಿಸಿ ಕ್ಷಣಾರ್ಧದಲ್ಲಿ ಪಡೆಯುವಂತಹ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಈ ಮಾದರಿಯಲ್ಲಿ ಕೆಲವೊಮ್ಮೆ, ಪ್ರಮಾಣಪತ್ರಗಳನ್ನು ಪಡೆಯುವ ಸಂದರ್ಭದಲ್ಲಿ ಹಣ ಕಡಿತ
ಗೊಳ್ಳುತ್ತದೆ. ಆದರೆ ಪ್ರಮಾಣಪತ್ರ ಮಾತ್ರ ಡೌನ್‌ಲೋಡ್ ಆಗುವುದಿಲ್ಲ, ಕಡಿತಗೊಂಡಿರುವ ಹಣವೂ ಬ್ಯಾಂಕ್ ಖಾತೆಗೆ ವಾಪಸ್‌ ಬರುವುದಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹೀಗೆ ಜನ ಕಳೆದುಕೊಂಡ ಹಣವು ಸರ್ಕಾರದ ಬೊಕ್ಕಸ ಸೇರುತ್ತಿದೆ.

ಖಾಸಗಿ ಸಂಸ್ಥೆಗಳ ವೆಬ್‍ಸೈಟ್‍ಗಳಲ್ಲಿ ವಿಮೆ ಪಾಲಿಸಿ, ಶುಲ್ಕ ರಸೀದಿಯಂತಹ ಸೇವೆ ಪಡೆಯಲು ಗ್ರಾಹಕರು ಹಣ ಪಾವತಿಸಿದರೆ, ಅವರು ತಾವು ನೀಡುವ ಸೇವೆಯನ್ನು ಗ್ರಾಹಕರ ಇ–ಮೇಲ್ ಐ.ಡಿಗೆ ಪಿ.ಡಿ.ಎಫ್ ಫೈಲ್‍ ಮೂಲಕ ಕಳುಹಿಸುತ್ತಾರೆ. ಇದೇ ಮಾದರಿಯಲ್ಲಿ, ನಾಡಕಚೇರಿ ವೆಬ್‍ಸೈಟ್‍ನಲ್ಲಿ ಸೇವೆ ಪಡೆಯಲು ಇಚ್ಛಿಸುವವರ ಇ–ಮೇಲ್ ಐ.ಡಿ ನಮೂದಿಸುವ ಆಯ್ಕೆಯನ್ನೂ ಸೇರಿಸಬೇಕಿದೆ. ಇದರಿಂದ ಈ ಸೇವೆಯನ್ನು ನಿರ್ಭೀತಿಯಿಂದ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತದೆ.

ಶಿವಶಂಕರ ಎಸ್., ಮುತ್ತರಾಯನಹಳ್ಳಿ, ಮಧುಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.