ಬುಧವಾರ, 19-1-1961
ನೆಹರೂ - ಚೌ ಭೇಟಿ ಸದ್ಯಕ್ಕೆ ಅಸಂಭವ
ನವದೆಹಲಿ, ಜ. 18 - ಚೀಣಾ ಪ್ರಧಾನ ಮಂತ್ರಿ ಚೌ ಎನ್ ಲಾಯ್ ರೊಡನೆ ಶೀಘ್ರದಲ್ಲೇ ತಮ್ಮ ಭೇಟಿ ಅಸಂಭವ ಎಂಬುದಾಗಿ ಭಾರತದ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ಲಾಲ್ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.
ಮೇಯರ್ ಸ್ಥಾನಕ್ಕೆ ಶ್ರೀ ಬಿ. ನಂಜಪ್ಪ
ಬೆಂಗಳೂರು, ಜ. 18 - ನಾಳೆ ಬೆಳಿಗ್ಗೆ ನಡೆಯಲಿರುವ ಬೆಂಗಳೂರು ಕಾರ್ಪೊರೇಷನ್ ಮೇಯರ್ ಚುನಾವಣೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಪಾರ್ಲಿಮೆಂಟರಿ ಉಪಸಮಿತಿ ಶ್ರೀ ಬಿ. ನಂಜಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಉಮೇದುವಾರರನ್ನಾಗಿ ನಾಮಕರಣ ಮಾಡಲಿದೆಯೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.