ADVERTISEMENT

ಲಾಭದಾಯಕ ಕೃಷಿಯಲ್ಲಿ ರೈತರಿಗೆ ನೆರವಾಗುವೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 2:33 IST
Last Updated 30 ಮಾರ್ಚ್ 2019, 2:33 IST
ಸುಮಾ
ಸುಮಾ   

ಕೃಷಿ ವಿಶ್ವವಿದ್ಯಾಲಯದ ಪದವಿಯಲ್ಲಿ ಚಿನ್ನದ ಪದಕ ವಿಜೇತೆಕೆ. ಸುಮಾ ಅವರೊಂದಿಗೆ ಮಾತುಕತೆ.

**

* ಕೃಷಿ ವಿಶ್ವವಿದ್ಯಾಲಯದ ಪದವಿಯಲ್ಲಿ 7 ಚಿನ್ನದ ಪದಕಗಳನ್ನು ಗಳಿಸಿದ್ದೀರಿ, ಕೃಷಿ ಕ್ಷೇತ್ರದ ಬಗ್ಗೆ ನಿಮಗೆ ಆಸಕ್ತಿ ಬೆಳೆದಿದ್ದು ಹೇಗೆ?
ನನ್ನ ತಂದೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಸಹಾಯಕರಾಗಿದ್ದಾರೆ. ಅವರು ನನ್ನೊಂದಿಗೆ ಕೃಷಿ ವಿಷಯವನ್ನೇ ಹೆಚ್ಚಾಗಿ ಚರ್ಚಿಸುತ್ತಿದ್ದರು. ಅವರಿಂದಾಗಿಯೇ ಈ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಬೇರೆ ಅವಕಾಶಗಳಿದ್ದರೂ ಕೃಷಿ ವಿಜ್ಞಾನವನ್ನೇ ಆಯ್ಕೆ ಮಾಡಿಕೊಂಡೆ.

ADVERTISEMENT

* ಓದಿಗೆ ನೀವು ನೀಡುತ್ತಿದ್ದ ಸಮಯವೆಷ್ಟು?
ಕೃಷಿ ಕಾಲೇಜಿನ ಪಠ್ಯ ಅಷ್ಟೇನೂ ಕಠಿಣವಾಗಿರುವುದಿಲ್ಲ. ಆಸಕ್ತಿ ಬೆಳೆಸಿಕೊಂಡರೆ ಸಾಕು. ನಾನು ದಿನಕ್ಕೆ ಎರಡು ಗಂಟೆ ಮಾತ್ರ ಓದುತ್ತಿದ್ದೆ. ನನಗೆ ಆಸಕ್ತಿದಾಯಕ ಕ್ಷೇತ್ರವಾದ್ದರಿಂದ ಸುಲಭ ಎನಿಸಿತು.

* ಮುಂದೆ ಏನಾಗಬೇಕು ಎಂದುಕೊಂಡಿದ್ದೀರಿ?
ಸದ್ಯ ನಾನು ಎಂ.ಎಸ್‌ಸಿ ಓದುತ್ತಿದ್ದೇನೆ. ಪಿಎಚ್‌.ಡಿ ಮಾಡಬೇಕು ಎಂದುಕೊಂಡಿದ್ದೇನೆ. ಸರ್ಕಾರಿ ನೌಕರಿಯೇ ಆಗಲಿ, ಖಾಸಗಿ ನೌಕರಿಯೇ ಆಗಲಿ ಕೃಷಿ ಕ್ಷೇತ್ರಕ್ಕೆ ನನ್ನದೇ ಕೊಡುಗೆ ನೀಡಬೇಕು ಎಂಬ ಆಸೆ ಇದೆ. ಲಾಭದಾಯಕ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ನೆರವಾಗಬೇಕು ಎಂದುಕೊಂಡಿದ್ದೇನೆ.

* ಯಾವ ರೀತಿಯ ಕೊಡುಗೆ ನೀಡಬೇಕೆಂಬ ಆಲೋಚನೆ ಇದೆ?
ಬದಲಾಗುತ್ತಿರುವ ಹವಾಮಾನದಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ, ಬರಗಾಲದ ಪರಿಸ್ಥಿತಿಯೂ ಅಧಿಕಗೊಳ್ಳುತ್ತಿದೆ. ಈ ಹವಾಮಾನಕ್ಕೆ ಹೊಂದಿಕೆಯಾಗುವಂಥ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ರೈತ ಸಮುದಾಯಕ್ಕೆ ಸಹಾಯ ಮಾ
ಡಬೇಕು ಎಂಬ ಆಲೋಚನೆ ಇದೆ. ಅದಕ್ಕೆ ಪೂರಕವಾದ ಸಂಶೋಧನೆಯಲ್ಲಿ
ತೊಡಗಿಕೊಳ್ಳುತ್ತೇನೆ.

ಈವರೆಗೆ ಸಂಶೋಧನೆ ನಡೆದಿಲ್ಲ ಎಂದಲ್ಲ, ಸಾಕಷ್ಟು ಸಂಶೋಧನೆಯಾಗಿದೆ. ಆದರೆ, ಅದು ಪ್ರಯೋಗಾಲಯದಿಂದ ರೈತರ ಜಮೀನಿಗೆ ತಲುಪಿಲ್ಲ. ರೈತರಿಗೆ ತಲುಪಿದರೆ ಮಾತ್ರ ಕೃಷಿ ಕ್ಷೇತ್ರದ ಪ್ರಗತಿ ಸಾಧ್ಯ. ಇಲ್ಲವಾದರೆ ಉಪಯೋಗವಿಲ್ಲ. ಈ ಕೆಲಸವನ್ನು ಮಾಡಬೇಕಿದೆ.

-ವಿಜಯಕುಮಾರ್ ಸಿಗರನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.