ADVERTISEMENT

ಗುರುವಾರ, 25–4–1968

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST

ಅಗತ್ಯ ಬಿದ್ದರೆ ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧ: ಎಸ್ಸೆನ್ 
ನವದೆಹಲಿ, ಏ. 24– ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

ಪ್ರೆಸ್‌ಕ್ಲಬ್ಬಿನ ಭೋಜನಕೂಟದಲ್ಲಿ ಮಾತನಾಡುತ್ತಿದ್ದ ಎಸ್ಸೆನ್ ಅವರು ಕೇಂದ್ರದಲ್ಲೂ ಅಂತಹ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.

ಅನ್ನಪೂರ್ಣೆ ಈ ವಸುಂಧರೆ 
ನವದೆಹಲಿ, ಏ. 24– ಮಾನವ ಕುಲಕ್ಕೆಲ್ಲ ಅನ್ನ ನೀಡುವ ಶಕ್ತಿ ಈ  ಭೂಮಿಗೆ ಇದೆ ಎಂಬುದು ರಷ್ಯದ ವಿಜ್ಞಾನಿಗಳ ನಂಬಿಕೆ. ಜಗತ್ತಿನಾದ್ಯಂತ ಕ್ರೂರ ಕ್ಷಾಮ ತಲೆದೋರುವುದೆಂಬ ಕೆಲ ಅಮೆರಿಕನ್ ವಿಜ್ಞಾನಿಗಳ ಮಾತಿನಲ್ಲಿ ಅವರಿಗೆ ನಂಬಿಕೆ ಇಲ್ಲ.

ADVERTISEMENT

ಜೀವನದ ಸಂಪನ್ಮೂಲಗಳನ್ನು ಹೆಚ್ಚಿಸಲು ವಿಜ್ಞಾನಕ್ಕೆ ಅಪಾರ ಅವಕಾಶವಿದೆ ಎಂಬುದು ಈ ಆಶಾವಾದಿ ವಿಜ್ಞಾನಿಗಳ ಭಾವನೆ. ಒಟ್ಟು ಭೂ ಪ್ರದೇಶದ ಶೇಕಡ 1 ರಷ್ಟು ಭಾಗದಲ್ಲಿ ಮಾತ್ರ ಈಗ ಸಾಗುವಳಿ ಮಾಡಲಾಗುತ್ತಿದೆ.

ಕೃಷ್ಣಾ ವಿವಾದ: ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ
ಹೈದರಾಬಾದ್, ಏ. 24– ಕೃಷ್ಣಾ ನೀರು ವಿವಾದದ ಬಗ್ಗೆ ಆಂಧ್ರ, ಮೈಸೂರು, ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸುವರು, ವಿವಾದವನ್ನು ಮಾತುಕತೆ ಮೂಲಕ ಮುಕ್ತಾಯಗೊಳಿಸುವ ಯತ್ನವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.