ADVERTISEMENT

ಚೀಣಿ ದುರಾಕ್ರಮಣದ ವಿರುದ್ಧ ಸೂಕ್ತ ಕ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬುಧವಾರ, 26-6-1963
ಚೀಣಿ ದುರಾಕ್ರಮಣದ ವಿರುದ್ಧ ಸೂಕ್ತ ಕ್ರಮ
ನವದೆಹಲಿ, ಜೂನ್ 25
- ಲಡಕ್‌ನಲ್ಲಿ ಕಾರಾಕೊರಂ ಕಣಿವೆಗೆ ಹೋಗುವ ಭಾರತದ ಎಂದಿನ ಕಾರವಾನ್ ರಸ್ತೆಯ ದೌಲತ್‌ಬೇಗ್ ಓಲ್ಡಿ ಎಂಬಲ್ಲಿಗೆ ಸಮೀಪದಲ್ಲಿ ಇತ್ತೀಚೆಗೆ ಚೀಣೀಯರು ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಸೇನಾ ನೆಲೆ ಒಂದನ್ನು ಸ್ಥಾಪಿಸಿರುವುದನ್ನು ಭಾರತ ಸರ್ಕಾರ ತುಂಬಾ ತೀವ್ರವಾಗಿ ಪರಿಗಣಿಸಿದೆ.

ಕಾಶ್ಮೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪ್ರಧಾನ ಮಂತ್ರಿ ನೆಹರೂರವರು ಈ ಬಗೆಗೆ ಘಳಿಗೆ ಘಳಿಗೆಗೂ ಹೆಚ್ಚಿನ ವರ್ತಮಾನ ತರಿಸಿಕೊಳ್ಳುತ್ತಿರುವರು. ಚೀಣೀಯರ ಈ ಅತಿಕ್ರಮಣದ ಬಗೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ ಪರ್ಯಾಲೋಚಿಸುತ್ತಿದೆಯೆಂದು ಗೊತ್ತಾಗಿದೆ.

ಕೀಲರ್‌ಳ ಚಟುವಟಿಕೆಗಳ ಬಗ್ಗೆ ಅಮೆರಿಕದ ಆತಂಕ
ಲಂಡನ್, ಜೂನ್ 25 -
ಪ್ರೋಫುಮೊ ಪ್ರಕರಣದ ಮುಖ್ಯ ವ್ಯಕ್ತಿಯೊಬ್ಬಳಾದ ಬೆಲೆವೆಣ್ಣು ಕ್ರಿಸ್ಟೈನ್ ಕೀಲರ್‌ಳ ಚಟುವಟಿಕೆಗಳು ವಾಸ್ತವವಾಗಿ ಮ್ಯಾಕ್ಮಿಲನ್ ಸರ್ಕಾರವನ್ನು ನಾಶ ಮಾಡಿರುವುದಷ್ಟೇ ಅಲ್ಲ ಅದರಿಂದ ಈಗ ಬ್ರಿಟನ್ - ಅಮೆರಿಕ ಸಂಬಂಧಕ್ಕೂ ಆಘಾತ ಬಿದ್ದಿದೆ.

ರಾಷ್ಟ್ರಪತಿ ಆರೋಗ್ಯ ಉತ್ತಮ
ನವದೆಹಲಿ, ಜೂನ್ 25
-ನಿನ್ನೆ ಅನಾರೋಗ್ಯಕ್ಕೊಳಗಾಗಿದ್ದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರು ಈಗ ಹುಷಾರಾಗಿದ್ದಾರೆ. ಇಂದು ಅವರಿಗೆ ಜ್ವರ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.