ಉಪರಾಷ್ಟ್ರಪತಿಯಿಂದ 20 ರಂದು ಗೋವಾ ಹೊಸ ಸರ್ಕಾರದ ಉದ್ಘಾಟನೆ
ನವದೆಹಲಿ, ಡಿ. 17 – ಉಪರಾಷ್ಟ್ರಪತಿ ಡಾ. ಜಕೀರ್ ಹುಸೇನ್‌ರವರು ಇದೇ 20 ರಂದು ಶುಕ್ರವಾರ ಪಂಜಿಂನಲ್ಲಿ ಗೋವಾದ ನೂತನ ಸರ್ಕಾರವನ್ನು ಉದ್ಘಾಟಿಸಲಿರುವರೆಂದು ಇಂದು ಇಲ್ಲಿ ತಿಳಿದುಬಂದಿದೆ. ಗೋವಾದ ಲೆಫ್ಟಿನೆಂಟ್ ಗೌರ್ನರ್‌ರವರು, ಗೋವಾದ ನೂತನ ಸರ್ಕಾರದ ರೂಪರೇಖೆಗಳ ಬಗೆಗೆ ವಿದೇಶ ವ್ಯವಹಾರ ಸಚಿವ ಖಾತೆ ಅಧಿಕಾರಿಗಳೊಡನೆ ಇದೀಗ ಮಾತುಕತೆಗಳನ್ನು ಮುಗಿಸುತ್ತಿರುವರು.
ಇಂದು ‘ಕುಟುಂಬ ಯೋಜನೆ ದಿನ’
ನವದೆಹಲಿ, ಡಿ. 17 –ಕುಟುಂಬ ಯೋಜನೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ ಡಿಸೆಂಬರ್ 18 ರಂದು ಇಡೀ ರಾಷ್ಟ್ರದಲ್ಲಿ ‘ಕುಟುಂಬ ಯೋಜನೆ ದಿನ’ವನ್ನು ಆಚರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.