ADVERTISEMENT

ಬುಧವಾರ, 5-10-1961

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಕಾಂಗ್ರೆಸ್ಸಿಗರ ಒಗ್ಗಟ್ಟಿಗೆ ಕರೆ
ಮಧುರೆ, ಅ. 4
- ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೆಗ ಕಾಂಗ್ರೆಸ್ಸಿಗರು ತಮ್ಮ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ, ಮಹಾಚುನಾವಣೆಯಲ್ಲಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿ ಇಂದು ಕರೆ ನೀಡಿದರು.

ಹೆಚ್ಚಿನ ಹಣದ ಕೊರತೆ
ಬೆಂಗಳೂರು, ಅ. 4
- ಸರ್ಕಾರಿ ನೌಕರರ ಸಂಬಳ ಸಾರಿಗೆಯ ಪುನರ್ ವಿಮರ್ಶೆ, ಪಾನನಿರೋಧದಿಂದಾಗಿ ರಾಜ್ಯದ ತೃತೀಯ ಪಂಚವಾರ್ಷಿಕ ಯೋಜನೆಗೆ ಒದಗಿಸಲು ಉಂಟಾಗುವ ಹೆಚ್ಚಿನ ಕೊರತೆಯನ್ನು ಸರಿದೂಗಿಸಲು `ಹೆಚ್ಚು ತೆರಿಗೆ ವಿಧಿಸ ಬೇಕಾಗುವುದು~ ಎಂದು ಅರ್ಥ ಸಚಿವ ಟಿ. ಮರಿಯಪ್ಪ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.