ADVERTISEMENT

ಬುಧವಾರ, 5-12-1962

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ರಷ್ಯದಿಂದ ವಚನ ಪಾಲನೆಖಚಿತ ಎಂದು ನೆಹರೂ
ನವದೆಹಲಿ, ಡಿ. 4 - ಭಾರತಕ್ಕೆ ಎಂ. ಐ. ಜಿ. ವಿಮಾನಗಳನ್ನು ಸರಬರಾಜು ಮಾಡಲು ಹಾಗೂ ಅವುಗಳ ತಯಾರಿಕೆಗೆ ಕಾರ್ಖಾನೆಯೊಂದನ್ನು ಸ್ಥಾಪಿಸಲು, ರಷ್ಯಾವು ಮೊದಲೇ ಒಪ್ಪಿಕೊಂಡಿದ್ದಂತೆ ನಡೆದು ಕೊಳ್ಳುವುದಾಗಿ ಸ್ಪಷ್ಟಪಡಿಸಿದೆ ಎಂಬುದಾಗಿ ಪ್ರಧಾನಿ ನೆಹರೂ ಇಂದು ಲೋಕ ಸಭೆಯಲ್ಲಿ ತಿಳಿಸಿದರು.

ನೀರಾವರಿ ಪಂಪ್‌ಗೆಒದಗಿಸುವ ವಿದ್ಯುತ್ದರದಲ್ಲಿ ಏರಿಕೆ?
ಬೆಂಗಳೂರು, ಡಿ. 4 - ನೀರಾವರಿ ಪಂಪ್ ಸೆಟ್‌ಗಳಿಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಮೇಲಿನ ದರವನ್ನು 3 ನಯಾ ಪೈಸೆಯಿಂದ 8 ನಯಾ ಪೈಸೆಗೆ ಏರಿಸಲು ರಾಜ್ಯದ ವಿದ್ಯುತ್ ಬೋರ್ಡ್ ಶಿಫಾರಸು ಮಾಡಿದೆಯೆಂದು ತಿಳಿದು ಬಂದಿದೆ.

ಭಾರತೀಯ ಯುದ್ದಕೈದಿಗಳ ಬಿಡುಗಡೆ
ನವದೆಹಲಿ, ಡಿ. 4 - ಗಾಯಗೊಂಡ ಹಾಗೂ ಅಶ್ವಸ್ಥರಾಗಿರುವ 64 ಜನ ಭಾರತೀಯ ಯುದ್ಧ ಕೈದಿಗಳನ್ನು ನಾಳೆ ಬೊಮ್ಡಿಲಾದಲ್ಲಿ ಭಾರತದ ರೆಡ್‌ಕ್ರಾಸ್‌ಗೆ ಒಪ್ಪಿಸಲಾಗುವುದು. ಚೀಣವು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದ 53 ಜನ ಭಾರತೀಯ ಯುದ್ಧ ಕೈದಿಗಳ ಪೈಕಿ ಒಬ್ಬನು ಮೃತಪಟ್ಟನೆಂದು ಚೀಣೀ ರೆಡ್‌ಕ್ರಾಸ್‌ನಿಂದ ಭಾರತದ ರೆಡ್‌ಕ್ರಾಸ್‌ಗೆ ಬಂದಿರುವ ಪತ್ರದಲ್ಲಿ ತಿಳಿಸಲಾಗಿದೆ. ಇನ್ನೂ ಹನ್ನೆರಡು ಜನ ಗಾಯಗೊಂಡ ಹಾಗೂ ಕಾಯಿಲೆ ಬಿದ್ದಿರುವ ಭಾರತೀಯ ಯುದ್ಧ ಕೈದಿಗಳನ್ನು ಭಾರತದ ರೆಡ್‌ಕ್ರಾಸ್‌ಗೆ ಒಪ್ಪಿಸಲಾಗುವುದೆಂದೂ ಚೀಣಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT