ಮೆನನ್, ಪಾಟೀಲರಿಗೆದೆಹಲಿ ಸ್ವಾಗತ
ನವದೆಹಲಿ, ಮಾ. 6- ಚುನಾವಣೆಗಳಲ್ಲಿ ಗೆದ್ದ ಬಳಿಕ ಸೋಮವಾರ ದೆಹಲಿಗೆ ವಾಪಸಾದ ರಕ್ಷಣಾ ಸಚಿವ ವಿ. ಕೆ. ಕೃಷ್ಣಮೆನನ್ ಹಾಗೂ ಆಹಾರ ಸಚಿವ ಎಸ್. ಕೆ. ಪಾಟೀಲರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರ ಮಿತ್ರರು ಹಾಗೂ ಅಭಿಮಾನಿಗಳು ಸ್ವಾಗತ ಬಯಸಿದರು.
ರಫ್ತು ಆದಾಯಕ್ಕೆ ವರವಾದತೆರಿಗೆ ರಿಯಾಯಿತಿ
ನವದೆಹಲಿ, ಮಾ. 6- ರಫ್ತುಗಳಿಂದ ಬರುವ ಆದಾಯಕ್ಕೆ ವರಮಾನ ತೆರಿಗೆ ರಿಯಾಯಿತಿಯನ್ನು ಸರ್ಕಾರವು ಕೊಡಬಹುದೆಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕೆ. ಸಿ. ರೆಡ್ಡಿ ತಿಳಿಸಿದರು. ವರ್ಷಕ್ಕೊಮ್ಮೆ ಅಮದು ಲೈಸೆನ್ಸುಗಳನ್ನು ನೀಡುವ ಹಿಂದಿನ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.