
ಪ್ರಜಾವಾಣಿ ವಾರ್ತೆಬೆಂಗಳೂರು, ಮಾ. 16– ಸರ್ಕಾರ ನೇಮಿಸಿರುವ ವಿಶೇಷ ಸಮಿತಿ ತಯಾರಿಸುತ್ತಿರುವ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಮಸೂದೆಯನ್ನು ಪರಿಶೀಲಿಸಲು ರಾಜ್ಯದ ವಿಧಾನಮಂಡಲ ಮುಂದಿನ ಮೇ ತಿಂಗಳಿನಲ್ಲಿ ಸೇರುವ ಸಂಭವವಿದೆ.
15 ಲಕ್ಷ ರೂಪಾಯಿ ಖರ್ಚಿನಲ್ಲಿ ಸ್ಥಾಪಿತವಾಗಲಿರುವ ವಿಶ್ವವಿದ್ಯಾನಿಲಯ ಮುಂದಿನ ಶಿಕ್ಷಣ ವರ್ಷದಿಂದ ಆರಂಭವಾಗುವ ನಿರೀಕ್ಷೆಯಿದೆ.
ಕೇಂದ್ರದ ಶಿಕ್ಷಣ ಸಚಿವ ಶ್ರೀ ಎಂ. ಸಿ. ಚಾಗ್ಲಾ ಅವರು ಜೂನ್ ತಿಂಗಳಿನಲ್ಲಿ ಈ ವಿಶ್ವವಿದ್ಯಾನಿಲಯದ ಆರಂಭೋತ್ಸವವನ್ನು ನೆರವೇರಿಸುವರೆಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.