ಮಂಗಳವಾರ, 10–3–1964
ಶರಾವತಿ ಯೋಜನೆ ವ್ಯವಹಾರದಲ್ಲಿ ಹಣದ ಪೋಲು: ಗಣಮುಖಿ ಟೀಕೆ
(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)
ಬೆಂಗಳೂರು, ಮಾ. 9– ಸರಕಾರ ಹೊರಡಿಸಿರುವ ಶ್ವೇತಪತ್ರದಿಂದ ಶರಾವತಿ ಯೋಜನೆಯ ವ್ಯವಹಾರದಲ್ಲಿ ಹಣ ಪೋಲಾಗಿರುವುದು ಸರ್ವವಿದಿತವಾಗಿದೆಯೆಂದು ಮಾಜಿ ಸಚಿವ ಶ್ರೀ ಅಣ್ಣಾರಾವ್ ಗಣಮುಖಿ ಅವರು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.
ತಮ್ಮ ಬಜೆಟ್ ಮೇಲಿನ ಭಾಷಣದಲ್ಲಿ ಶ್ವೇತಪತ್ರವೊಂದನ್ನೇ ಪ್ರಸ್ತಾಪಿಸಿದ ಮಾಜಿ ಸಚಿವರು ಟೆಂಡರುಗಳ ವ್ಯವಹಾರದಲ್ಲಿ ‘ಸರ್ಕಾರ ಎಲ್ಲ ಘಟ್ಟಗಳಲ್ಲೂ ತನ್ನ ಅಧಿಕಾರವನ್ನು ಚಲಾಯಿಸದೆ ಬಿಟ್ಟುಕೊಟ್ಟಿದೆ ಎಂಬುದು ಸ್ಪಷ್ಟವಾಗುವುದು’ ಎಂದು ವಿವರಿಸಿದರು.
‘ರಾಜಭವನ’ವಾಗಿ ಕೃಮಾರಕೃಪಾ
ಬೆಂಗಳೂರು, ಮಾ. 9– ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ ‘ಕುಮಾರಕೃಪಾ’ ರಾಜ್ಯದ ಪ್ರಥಮ ಕಾಯಂ ರಾಜಭವನವಾಗಿ ಪರಿವರ್ತನೆಗೊಳ್ಳುವುದೆಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.