ADVERTISEMENT

ಮಂಗಳವಾರ, 17–12–1963

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

16 ವಸ್ತುಗಳ ಬೆಲೆ ಹತೋಟಿ ರದ್ದು
ನವದೆಹಲಿ, ಡಿ. 16 – ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಮೇಲಿನ ಬೆಲೆ ಹತೋಟಿಯನ್ನು ಕ್ರಮೇಣ ಸಡಿಲಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರದ ಅರ್ಥಸಚಿವ ಶ್ರೀ ಟಿ. ಟಿ. ಕೃಷ್ಣಮಾಚಾರಿ ಅವರು ಇಂದು ಲೋಕ ಸಭೆಯಲ್ಲಿ ಘೋಷಿಸಿದರು.

ಕೇಂದ್ರ ಸರ್ಕಾರದ ನಿರ್ಧಾರದ ಪ್ರಕಾರ ಬ್ಲೀಚಿಂಗ್‌ ಪೌಡರ್‌, ಬಟ್ಟೆ ಸಾಬೂನು, ಟೈರು, ಟ್ಯೂಬುಗಳು, ಗಾಜಿನ ಹಾಳೆ, ಪೇಪರ್‌ ಬೋರ್ಡ್‌, ರೇಯಾನ್‌ಹುರಿ, ಕಾಸ್ಟಿಕ್‌ ಸೋಡ, ಹೈಡ್ರೋಕ್ಲೋರಿಕ್‌ ಆಸಿಡ್‌, ಕ್ಲೋರಿನ್‌, ಕ್ಯಾಲ್ಸಿಯಂ ಕಾರ್ಬೈಡ್‌, ಚೆಲಿಪೆಟ್ಲುಪ್ಪು ವಸ್ತುಗಳ ಮೇಲೆ ಬೆಲೆ ಹತೋಟಿ ರದ್ದಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.