ADVERTISEMENT

ಮಂಗಳವಾರ, 18-6-1963

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಮ್ಯಾಕ್ಮಿಲನ್‌ರ `ಉದಾಸೀನ ಭಾವನೆ': ವಿಲ್ಸನ್ ಖಂಡನೆ
ಲಂಡನ್, ಜೂನ್ 17 - ಪ್ರೋಫುಮೊ ಪ್ರಕರಣದ ಸಂಬಂಧದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್ಮಿಲನ್‌ರವರು `ರಾಷ್ಟ್ರೀಯ ಸುರಕ್ಷತೆಯೊಡನೆ ಜೂಜಾಡಿ ಬಿಟ್ಟಿದ್ದಾರೆ' ಎಂದು ಲೇಬರ್ ವಿರೋಧ ಪಕ್ಷದ ನಾಯಕ ಹೆರಾಲ್ಡ್ ವಿಲ್ಸನ್ ಇಂದು ಕಾಮನ್ಸ್ ಸಭೆಯಲ್ಲಿ ಆಪಾದಿಸಿದರು.

1,700 ಮೂಟೆ ಸಿಮೆಂಟ್ ನಾಪತ್ತೆ
ಬೆಂಗಳೂರು, ಜೂನ್ 17 - ಶರಾವತಿ ಯೋಜನೆ ಪ್ರದೇಶದಲ್ಲಿ 1700 ಚೀಲ ಸಿಮೆಂಟ್ ಮಾಯವಾಗಿದೆಯೆಂದೂ ಆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್‌ನ ಉನ್ನತ ಮಟ್ಟದ ತನಿಖಾ ವ್ಯವಸ್ಥೆ ಇದುವರೆಗೆ ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ.

ಗಣನೀಯ ಪ್ರಮಾಣದಷ್ಟು ಸಿಮೆಂಟನ್ನು ನದಿಗಳು ಮತ್ತು ಭಾವಿಗಳಲ್ಲಿ ಸುರಿಯಲಾಗಿದೆಯೆಂದು ಡಿ.ಐ.ಜಿ. ಶ್ರೀ ಆರ್. ಎ. ಮುಂಡ್‌ಕೂರ್ (ಸಿ.ಐ.ಡಿ. ಮತ್ತು ರೈಲ್ವೆ) ಅವರನೇತೃತ್ವದಲ್ಲಿ ನಡೆದ  ತನಿಖೆಯಿಂದ ತಿಳಿದು ಬರುತ್ತದೆ.

ಆಕ್ರಮಣಕ್ಕಾಗಿಚೀಣದ ಸಿದ್ಧತೆ: ಭಾರತದ ಆಪಾದನೆ
ನವದೆಹಲಿ, ಜೂನ್ 17 - ಚೀಣ ಸರ್ಕಾರವು ಲಡಾಕ್‌ನಲ್ಲಿ ನಡೆಸಿದ ಆಕ್ರಮಣದಿಂದುಂಟಾದ ಲಾಭವನ್ನು ಭದ್ರಪಡಿಸಿಕೊಂಡು ಮತ್ತಷ್ಟು ಆಕ್ರಮಣ ನಡೆಸಲು ನೆಲೆಯೊಂದನ್ನು ನಿರ್ಮಿಸಿ ಕೊಳ್ಳುತ್ತಿದೆಯೆಂದು ಭಾರತ ಸರ್ಕಾರವು ಆಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.