ADVERTISEMENT

ಮಂಗಳವಾರ, 24-4-1962

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಬಟ್ಟೆ, ಹೊಗೆಸೊಪ್ಪು, ಟೀ ಮೇಲೆ ತೆರಿಗೆ ಏರಿಕೆ
ನವದೆಹಲಿ, ಏ. 23 - ಹಣಕಾಸಿನ ಸಚಿವ ಮೊರಾರ‌್ಜಿ ದೇಸಾಯಿಯವರು ಇಂದು ಸಂಜೆ 3ನೆಯ ಲೋಕ ಸಭೆಯಲ್ಲಿ ಮಂಡಿಸಿದ 1962-63ರ ಬಜೆಟ್ ಅಂದಾಜು ಪತ್ರದಲ್ಲಿ ಸೂಚಿಸಿದ ತೆರಿಗೆ ಏರಿಕೆ ಕ್ರಮಗಳಿಂದ ಬಟ್ಟೆ, ಟೀ, ಸಿಗರೇಟು, ಹೊಗೆಸೊಪ್ಪು ಬೆಲೆಗಳು ಹೆಚ್ಚುವುವು.

3ನೇ ದರ್ಜೆ ರೈಲು ಪ್ರಯಾಣ ದರ ಹೆಚ್ಚಿಸಬೇಡಿ
ನವದೆಹಲಿ, ಏ. 23 - ಮೂರನೇ ದರ್ಜೆಯ ರೈಲು ಪ್ರಯಾಣ ದರವನ್ನು ಹೆಚ್ಚಿಸಬಾರದೆಂದು ಅನೇಕ ಮಂದಿ ಕಾಂಗ್ರೆಸ್ ಲೋಕಸಭಾ ಸದಸ್ಯರು ಪಕ್ಷದ ರೈಲ್ವೆ ಸ್ಥಾಯಿ ಸಮಿತಿಯ ಸಭೆಯಲ್ಲಿ ಇಂದು ರೈಲ್ವೆ ಸಚಿವ ಸರ್ದಾರ್ ಸ್ವರಣಸಿಂಗ್ ಅವರಿಗೆ ಒತ್ತಾಯ ಮಾಡಿದರೆಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.