3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ: ದಾಸಪ್ಪ
ಬೆಂಗಳೂರು, ಮಾ. 20 – ಇನ್ನು 3 ತಿಂಗಳಲ್ಲಿ ಹಾಸನ – ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗುವ ಭರವಸೆಯನ್ನು ರೈಲ್ವೆ ಸಚಿವ ಶ್ರೀ ಎಚ್. ಸಿ. ದಾಸಪ್ಪನವರು ಇಂದು ಇಲ್ಲಿ ನೀಡಿದರು.
ಮಂಗಳೂರಿನಿಂದ ಸಕಲೇಶಪುರ ತಲುಪಿದ ನಂತರ ಅಲ್ಲಿಂದ ಚಿಕ್ಕಮಗಳೂರು ಮಾರ್ಗವಾಗಿ ಕಡೂರಿಗೆ ರೈಲು ಮಾರ್ಗ ರಚಿಸಬೇಕಂಬ ಹೊಸ ಸಲಹೆಯೊಂದು ಬಂದಿದೆಯೆಂದೂ, ಈ ಸಲಹೆ ಪರಿಶೀಲನೆಯಲ್ಲಿದೆಯೆಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.