ರಾಜ್ಯದ ಹೆಸರಿನ ಬದಲಾವಣೆ ಚರ್ಚೆ
ಬೆಂಗಳೂರು, ಆ. 2 - ಕನ್ನಡ ರಾಜ್ಯದ ಜನತೆಯ ಆಸೆಯಂತೆ ರಾಜ್ಯದ ಹೆಸರು `ಕರ್ನಾಟಕ~ ಎಂದಾಗಬೇಕೆಂದು ಇಂದು ವಿಧಾನ ಸಭೆಯಲ್ಲಿ ಕೆಲ ಸದಸ್ಯರು ವಾದಿಸಿದರೆ, `ಬಲವಂತವಾಗಿ ಹೆಸರನ್ನು ಬದಲಾಯಿಸುವುದು ರಾಜ್ಯ ಇಬ್ಭಾಗವಾಗಬೇಕೆಂಬ ಚಳವಳಿಗೆ ನಾಂದಿ~ ಎಂದು ಹೆಸರಿನ ಬದಲಾವಣೆಯನ್ನು ವಿರೋಧಿಸುವ ಸದಸ್ಯರು ಎಚ್ಚರಿಕೆ ನೀಡಿದರು.
ಮೈಸೂರು ರಾಜ್ಯವನ್ನು `ಕರ್ನಾಟಕ~ ರಾಜ್ಯವೆಂದು ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಖಾಸಗಿ ನಿರ್ಣಯದ ಚರ್ಚೆ ಇಂದು ಆರಂಭವಾಗಿ ಬಿಸಿ ಮಾತುಗಳಿಂದ ತುಂಬಿದ್ದ ಭಾಷಣಗಳು ನಡೆದವು.
ಮಧ್ಯಾಹ್ನ ಊಟದ ಯೋಜನೆ
ಬೆಂಗಳೂರು, ಆ. 2 - ಪ್ರಾಥಮಿಕ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಮಧ್ಯಾಹ್ನದ ಊಟವನ್ನೊದಗಿಸುವ ಒಂದು ವ್ಯಾಪಕವಾದ ಯೋಜನೆಯನ್ನು ಮೈಸೂರು ಸರ್ಕಾರವು ಈಗ ತಯಾರಿಸುತ್ತಿದೆ.
ರಾಜ್ಯದ ಉನ್ನತ ಅಧಿಕಾರಿಗಳು ಇತ್ತೀಚೆಗೆ ಮದ್ರಾಸು ರಾಜ್ಯದಲ್ಲಿ ಪ್ರವಾಸ ಮಾಡಿ, ಅಲ್ಲಿ ಬಹಳ ಆದರ್ಶ ಪ್ರಾಯವಾಗಿ ನಡೆಯುತ್ತಿದೆಯೆನ್ನಲಾದ ಉಚಿತ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಶೀಲಿಸಿಕೊಂಡು ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.