ADVERTISEMENT

ಶುಕ್ರವಾರ, 5–4–1968

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

* ಹಾನಾಯ್ ಜತೆ ಶೀಘ್ರ ಚರ್ಚೆಗೆ ಸೂಕ್ತ ಕ್ರಮ: ಅಧ್ಯಕ್ಷ ಜಾನ್ಸ‌ನ್
ವಾಷಿಂಗ್ಟನ್, ಏ. 4–
ಉತ್ತರ ವಿಯಟ್ನಾಂ ಜತೆ ಶೀಘ್ರವೇ ಮಾತುಕತೆ ನಡೆಸಲು ಅಮೆರಿಕವು ಸೂಕ್ತ ವ್ಯವಸ್ಥೆ ಮಾಡುತ್ತದೆ ಎಂದು ಅಧ್ಯಕ್ಷ ಜಾನ್ಸನ್ ಇಂದು ಪ್ರಕಟಿಸಿದರು.

ಹಾನಾಯ್ ಹೇಳಿಕೆ ಕೊಟ್ಟ ಐದು ಗಂಟೆಗಳ ನಂತರ ಜಾನ್ಸನ್‌ರವರು ಟೆಲಿವಿಜನ್ ಮೂಲಕ ಪ್ರತಿಕ್ರಿಯೆ ಸೂಚಿಸುತ್ತ, ‘ನಾವು ಉತ್ತರ ವಿಯಟ್ನಾಂ ಪ್ರತಿನಿಧಿಗಳೊಡನೆ ಸಂಪರ್ಕ ಸ್ಥಾಪಿಸಿಕೊಳ್ಳುತ್ತೇವೆ’ ಎಂದರು.

* ಮಾತುಕತೆಗೆ ಹ್ಯಾರಿಮನ್, ಥಾಂಪ್ಸನ್
ವಾಷಿಂಗ್ಟನ್, ಏ. 4–
ಉತ್ತರ ವಿಯಟ್ನಾಂ ಜತೆ ಮಾತುಕತೆ ನಡೆಸಲು 76 ವರ್ಷ ವಯಸ್ಸಿನ ಆವರೆಲ್ ಹ್ಯಾರಿಮನ್ ಮತ್ತು ರಷ್ಯದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಲೆವೆಲಿನ್ ಥಾಂಪ್ಸನ್ ಅವರನ್ನು ಅಮೆರಿಕವು ನಿಯೋಜಿಸಿದೆ.

ADVERTISEMENT

ಫಲಪ್ರದ, ಪೂರ್ಣ ಪ್ರಮಾಣದ ಶಾಂತಿ ಮಾತುಕತೆಗಳಿಗೆ ಹಾನಾಯ್ ಸಿದ್ಧವಿದೆಯೇ ಎಂಬುದನ್ನು ಪರಿಶೀಲಿಸುವುದೇ ಈ ಪ್ರತಿನಿಧಿಗಳಿಬ್ಬರ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.