ADVERTISEMENT

ಸೋಮವಾರ, 16-1-1962

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಇಂಡೊನೀಸಿಯ ನೌಕೆಗಳ ಮೇಲೆ ಡಚ್ ಗುಂಡಿನ ದಾಳಿ
ದಿ ಹೇಗ್, ಜ. 15-  ಪಶ್ಚಿಮ ನ್ಯೂಗಿನಿಯ ದಕ್ಷಿಣ ತೀರ ಪ್ರದೇಶದಲ್ಲಿ ಗಸ್ತು ಮಾಡುತ್ತಿರುವ ಡಚ್ ಯುದ್ಧ ನೌಕೆಗಳು ಇಂದು ಡಚ್ ನೀರಿನಲ್ಲಿದ್ದುವೆಂದು ಹೇಳಲಾದ ಇಂಡೊನೀಸಿಯದ ಮೋಟರ್ ಟಾರ್ಪೆಡೊ ಹಡಗುಗಳ ಮೇಲೆ ಗುಂಡು ಹಾರಿಸಿದವೆಂದು ಡಚ್ ವಾರ್ತಾಸಂಸ್ಥೆ “ಹಾಲೆಂಡಿಯ” ಇಂದು ರಾತ್ರಿ ವರದಿ ಮಾಡಿತು.

ಟೀಕೆ ಅಸಂಗತ
ಮುಂಬೈ, ಜ. 15- “ನೆಹರೂ” ಅವರ ನೀತಿಗಳೆಲ್ಲಾ ಸರಿಯಾಗಿವೆಯೆಂದೂ, ಆದರೆ ರಕ್ಷಣಾ ಸಚಿವ ಶ್ರಿ ವಿ.ಕೆ. ಮೆನನ್‌ರು ಆ ನೀತಿಗಳನ್ನು ವಿದ್ರೂಪಗೊಳಿಸಲು ಪ್ರಯತ್ನಿಸುತ್ತಿರುವರೆಂದೂ ಯಾರೇ ಹೇಳಿದರೂ ಅದು ಪೂರ್ಣವಾಗಿ ವಂಚನೆಯೆಂದು ಪ್ರಧಾನಿ ನೆಹರೂ ಇಂದು ಇಲ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.