ಆಲ್ಜೀರಿಯಾದಲ್ಲಿ ಏಳು ವರ್ಷಗಳ ಕದನ ಅಂತ್ಯ
ಎವಿನ್ (ಫ್ರೆಂಚ್‌ಆಲ್ಪ್ಸ್), ಮಾ. 18 - ಆಲ್ಜೀರಿಯಾ ಯುದ್ಧಸ್ತಂಭನ ಕುರಿತು ಇಂದು ಒಪ್ಪಂದ ಪೂರ್ಣವಾಯಿತೆಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.
7 ವರ್ಷಗಳಿಂದ ಆಲ್ಜೀರಿಯಾದಲ್ಲಿ ಜರುಗುತ್ತಿದ್ದ ಕದನ ಕೊನೆಗಾಣಿಸುವುದಕ್ಕೆ ಸಂಧಾನ ಪ್ರಯತ್ನ ಯಶಸ್ವಿಯಾಯಿತು.
ಹೆಚ್ಚು ತೆರಿಗೆ ಕೊಡಲು ಸಿದ್ಧರಾಗಿರಲು ಸೂಚನೆ
ಬೆಂಗಳೂರು, ಮಾ. 18- ಮಾರ್ಚಿ 31ರ ನಂತರದ ಆರ್ಥಿಕ ವರ್ಷದಿಂದ, ಸಾರ್ವಜನಿಕರು ರಾಜ್ಯ ಸರಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಮತ್ತು ಉಳಿತಾಯದ ಮೂಲಕ ವರ್ಷಕ್ಕೆ 8 ರಿಂದ 10 ಕೋಟಿ ಹೆಚ್ಚಿಗೆ ಕೊಡಬೇಕಾಗುವುದೆಂದು ನೂತನ ಮುಖ್ಯಮಂತ್ರಿ ಎಸ್.ಆರ್. ಕಂಠಿಯವರು ಇಂದು ಇಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.