ರಾಷ್ಟ್ರಪತಿಯಿಂದ ನಾಗಾಲ್ಯಾಂಡ್ ಉದ್ಘಾಟನೆ
ಕೊಹಿಮಾ, ಡಿ. 1– ಭಾರತ ಗಣರಾಜ್ಯದಲ್ಲಿ ಹದಿನಾರನೇ ರಾಜ್ಯವಾಗಿ ಅವತರಿಸುತ್ತಿರುವ ನಾಗಾಲ್ಯಾಂಡ್ ರಾಜ್ಯದ ಉದ್ಘಾಟನೆ ಇಂದು ಇಲ್ಲಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರಿಂದ ನೆರವೇರಿತು. ವರ್ಣರಂಜಿತ ಉಡುಪು ಧರಿಸಿದ ನಾಗಾ ಪುರುಷರು, ಮಹಿಳೆಯರು, ಮಕ್ಕಳು, ಸುಮಾರು ಹತ್ತು ಸಹಸ್ರಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಭಾರತದ ಮತ್ತೊಂದು ರಾಕೆಟ್ ಪ್ರಯೋಗ
ಜೈಪುರ, ಡಿ. 1– ಅಂತರಿಕ್ಷದ ಶಾಂತಿಯುತ ಸಂಶೋಧನೆಗಾಗಿ ಭಾರತವು ಮತ್ತೊಂದು ರಾಕೆಟ್ ಅನ್ನು ಜನವರಿಯಲ್ಲಿ ಪ್ರಯೋಗಿಸಬಹುದೆಂದು ಭಾರತದ ಅಂತರಿಕ್ಷ ಸಂಶೋಧನಾ ಸಮಿತಿಯ ಅಧ್ಯಕ್ಷ ಡಾ. ವಿಕ್ರಂ ಸಾರ ಭಾಯ್ ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.