
ಪ್ರಜಾವಾಣಿ ವಾರ್ತೆಎಲ್ಲರಿಗೂ ಉದ್ಯೋಗದ ಹಕ್ಕು ದೊರಕಿಸುವ ಗುರಿ
ಬೆಂಗಳೂರು, ಸೆ. 25 - `ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಉದ್ಯೋಗದ ಹಕ್ಕನ್ನು ದೊರಕಿಸಿಕೊಟ್ಟು ಮೂಲಭೂತವಾದ ಜೀವನ ಸೌಕರ್ಯಗಳನ್ನು ಕಲ್ಪಿಸುವ ಗುರಿಯೆಡೆಗೆ ನಿಶ್ಚಿತ ಮುಂದಡಿಯಿಡುವ~ ಉದ್ದೇಶದಿಂದ ಕೂಡಿರುವ 250 ಕೋಟಿ ರೂಪಾಯಿಗಳ ವೆಚ್ಚದ, ರಾಜ್ಯದ ಪಂಚವಾರ್ಷಿಕ ಯೋಜನೆಯನ್ನು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರು ಇಂದು ಇಲ್ಲಿ ಪ್ರಕಟಿಸಿದರು. ಈ ಯೋಜನೆಯ ದಾಖಲೆಯನ್ನು 965 ಪುಟಗಳ ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.
ನೆಹ್ರೂ ಸೂತ್ರದ ಮಿತಿಯಲ್ಲೇ ಪಂಜಾಬ್ ಸಮಸ್ಯೆ ಪರಿಹಾರ
ಬೆಂಗಳೂರು, ಸೆ. 25 - ಪಂಜಾಬಿನ ಸಮಸ್ಯೆಗೆ ಯಾವುದೇ ಪರಿಹಾರವು ಈಗಾಗಲೇ ನೆಹರೂರವರು ಸ್ಪಷ್ಟಪಡಿಸಿರುವ ಸೂತ್ರದ ಚೌಕಟ್ಟಿನೊಳಗೇ ಇರಬೇಕೆಂದು ಕೇಂದ್ರದ ಗೃಹ ಸಚಿವ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಇಂದು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.