ADVERTISEMENT

ಹಸಿವಿನ ವಿರುದ್ಧ ಹೋರಾಟಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ಬುಧವಾರ, 5-6-1963

ಹಸಿವಿನ ವಿರುದ್ಧ ಹೋರಾಟಕ್ಕೆ ಕರೆ

ವಾಷಿಂಗ್ಟನ್, ಜೂನ್ 4 -ವಿಶ್ವದಲ್ಲಿ ಹಸಿವೆಯನ್ನು ಕಡಿಮೆ ಮಾಡಲು ಆಹಾರದ ವಿತರಣೆಯನ್ನು ಉತ್ತಮ ಪಡಿಸುವ ಹಾಗೂ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಆಹಾರದ ಉತ್ಪಾದನೆ ಅಧಿಕವಾಗುವಂತೆ ಮಾಡುವ ಪ್ರಯತ್ನಗಳಲ್ಲಿ ವಿಶ್ವ ಆಹಾರ ಕಾಂಗ್ರೆಸ್ ಯಶಸ್ವಿಯಾದರೆ ಅದರ ಉದ್ದೇಶ ಸಾಧಿತವಾದಂತೆಯೇ ಎಂದು ಭಾರತದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಕರೆ ಇತ್ತರು.

ಕಡ್ಡಾಯ ಜೀವವಿಮೆ: ಮೊರಾರ್ಜಿ ಸೂಚನೆ
ನವದೆಹಲಿ, ಜೂನ್ 4 - ಜೀವವಿಮೆಯನ್ನು ಕಡ್ಡಾಯ ಮಾಡುವ ದಿನ ಬರಬಹುದೆಂದು ಹಣಕಾಸಿನ ಸಚಿವ ಶ್ರೀ ಮೊರಾರ‌್ಜಿ ದೇಸಾಯ್ ಇಲ್ಲಿ ತಿಳಿಸಿದರು.

101ಜನರಿದ್ದ ವಿಮಾನ ನಾಪತ್ತೆ
ಜೂನೋ, ಅಲಾಸ್ಕ ಜೂನ್ 4 - 101 ಜನರನ್ನು ಹೊತ್ತ ವಾಷಿಂಗ್ಟನ್ `ಮೆಕ್‌ಕಾರ್ಡ್' ವಿಮಾನ ನೆಲೆಯಿಂದ ಅಲಾಸ್ಕದ ಅಂಕರೇಜ್‌ನ  ಬಳಿಯಿರುವ ಎಲಿಮೆಂಡಾರ್ಫ್‌ಗೆ ಹೋಗುತ್ತಿದ್ದ ವಿಮಾನವೊಂದು ಅಲಾಸ್ಕದ ತೀರದ ಮೇಲೆ ನಾಪತ್ತೆಯಾಗಿರುವುದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.