ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 24–1–1995

ಮಂಗಳವಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:44 IST
Last Updated 23 ಜನವರಿ 2020, 19:44 IST

ವಿಶ್ವ ವ್ಯಾಪಾರಕ್ಕೆ ಕಾರ್ಮಿಕ ಸ್ಥಿತಿಗತಿ ಷರತ್ತು
ನವದೆಹಲಿ, ಜ. 23 (ಯುಎನ್‌ಐ)– ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಆಯಾ ದೇಶದಲ್ಲಿನ ಕಾರ್ಮಿಕರ ಸ್ಥಿತಿಗತಿ ತಳಕು ಹಾಕುವ ಪಾಶ್ಚಾತ್ಯ ರಾಷ್ಟ್ರಗಳ ಪ್ರಯತ್ನವನ್ನು ಇಂದು ಮುಕ್ತಾಯಗೊಂಡ ಅಲಿಪ್ತ ಮತ್ತು ಇತರ ಅಭಿವೃದ್ಧಿಶೀಲ ದೇಶಗಳ ಕಾರ್ಮಿಕ ಸಚಿವರ ಐದು ದಿನಗಳ ಸಮಾವೇಶ ಸಾರಾಸಗಟಾಗಿ ತಿರಸ್ಕರಿಸಿತು.

ಎಲ್ಲ ದೇಶಗಳಿಗೂ ಆರ್ಥಿಕ ಅಭಿವೃದ್ಧಿಯ ಅವಕಾಶ ಒದಗಿಸುವ ಉರುಗ್ವೆ ಸುತ್ತಿನ ಒಪ್ಪಂದವನ್ನು ಸಭೆ ಸ್ಥಿರೀಕರಿಸಿತು. ಕಾರ್ಮಿಕರ ಸ್ಥಿತಿಗತಿ ಸುಧಾರಣೆ ಅಥವಾ ಪರಿಸರ ರಕ್ಷಣೆಯ ಹೆಸರಿನಲ್ಲಿ ಸಿರಿವಂತ ದೇಶಗಳು ಅಭಿವೃದ್ಧಿಶೀಲ ದೇಶಗಳ ವ್ಯಾಪಾರದ ಮೇಲೆ ಕಟ್ಟುಪಾಡು ಹೇರಲು ಮುಂದಾಗುವುದು ಉರುಗ್ವೆ ಒಪ್ಪಂದದ ಮೂಲಕ್ಕೇ ಕೊಡಲಿ ಏಟು ಹಾಕುತ್ತದೆ ಎಂದು ಸಮಾವೇಶ ಅಂಗೀಕರಿಸಿದ ‘ದೆಹಲಿ ಘೋಷಣೆ’ ಎಚ್ಚರಿಸಿದೆ.

ಕಾಲಮಿತಿಯೊಳಗೆ ಕೃಷ್ಣಾ ಯೋಜನೆ
ವಿಜಾಪುರ, ಜ. 23– ‘ಆಲಮಟ್ಟಿಗೆ ನನ್ನ ಪ್ರಥಮ ಪ್ರಗತಿ ಪರಿಶೀಲನಾ ಭೇಟಿ ಇದು. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಂತೆ ವಸ್ತುಸ್ಥಿತಿ ಪರಿಶೀಲಿಸಿ, ಪ್ರಸಕ್ತ ಅಭಿವೃದ್ಧಿ ವಿದ್ಯಮಾನಗಳನ್ನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಚಾವತ್ ತೀರ್ಪಿನಂತೆ 2000ನೇ ಇಸವಿಯ ಕಾಲಮಿತಿಯಲ್ಲೇ ಈ ಯೋಜನೆ ಪೂರ್ಣಗೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಮುಖ್ಯಮಂತ್ರಿ ದೇವೇಗೌಡರು ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.