ADVERTISEMENT

25 ವರ್ಷಗಳ ಹಿಂದೆ: ಬುಧವಾರ, 25–1–1995

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 20:06 IST
Last Updated 24 ಜನವರಿ 2020, 20:06 IST

ಅಪರಾಧ ಪ್ರಕ್ರಿಯೆ ಸಂಹಿತೆ ತಿದ್ದುಪಡಿಗೆ ಕೇಂದ್ರ ಒಪ್ಪಿಗೆ
ನವದೆಹಲಿ, ಜ. 24 (ಯುಎನ್‌ಐ)– ಕೋಮು ಗಲಭೆಗಳನ್ನು ಬಹಳ ಬೇಗನೆ ನಿಗ್ರಹಿಸಲು ಅನುವಾಗುವಂತೆ 1963ರ ಅಪರಾಧ ಪ್ರಕ್ರಿಯಾ ಸಂಹಿತೆಗೆ ಸೂಕ್ತ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ.

ಅಲ್ಲದೆ ಈ ಗಲಭೆ ಆರೋಪಿಗಳನ್ನು ಟಾಡಾ ಕಾಯ್ದೆಯ ಮಾದರಿಯಲ್ಲೇ ವಿಚಾರಣೆಗೆ ಒಳಪಡಿಸಿ, ಗರಿಷ್ಠ ಎರಡು ವರ್ಷಾವಧಿಯ ಶಿಕ್ಷೆ ವಿಧಿಸಲೂ ಅದು ಸಮ್ಮತಿಸಿದೆ. ಉದ್ದೇಶಪೂರ್ವಕವಾಗಿ ಅಥವಾ ಅಕ್ರಮವಾಗಿ ಬಂಧಿತನಾದ ವ್ಯಕ್ತಿಗೆ ಪರಿಹಾರದ ಹಣ ನೀಡಲು ಅವಕಾಶ ಮಾಡಿ ಭಾರತೀಯ ದಂಡ ಸಂಹಿತೆಯ 220ನೇ ವಿಧಿಗೂ ತಿದ್ದುಪಡಿ ತರಲಾಗುತ್ತದೆ.

ಈದ್ಗಾ: ಧ್ವಜಾರೋಹಣಕ್ಕೆ ಅಂಜುಮನ್ ಸಂಸ್ಥೆ ನಿರ್ಧಾರ
ಹುಬ್ಬಳ್ಳಿ, ಜ. 24– ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವುದಾಗಿ ಅಂಜುಮನ್ ಇ ಇಸ್ಲಾಂ ಸಂಸ್ಥೆ ಇಂದು ರಾತ್ರಿ ಪ್ರಕಟಿಸಿತು. ಈ ನಿರ್ಧಾರದೊಂದಿಗೆ ಕಳೆದ ಮೂರು ವರ್ಷಗಳಿಂದ ದೇಶದ ಗಮನವನ್ನೇ ಸೆಳೆದಿದ್ದ ವಿವಾದಕ್ಕೆ ಅಂತಿಮ ತೆರೆ ಬಿತ್ತು.

ADVERTISEMENT

ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಕಾಲೆಬುಡ್ಡೆ, ಗೌರವ ಕಾರ್ಯದರ್ಶಿ ಎ.ಆರ್.ಜೆ. ಪಠಾಣ್, ಜಂಟಿ ಕಾರ್ಯದರ್ಶಿ ಅಬ್ದುಲ್‌ ಅಜೀಜ್ ಗಂಗೊಳ್ಳಿ ಹಾಗೂ ಖಜಾಂಚಿ ಬಾಶಿ ಎಚ್. ಮುನ್ಷಿ ಅವರು ‘ಮುಸ್ಲಿಂ ಸಮುದಾಯದ ಧರ್ಮನಿರಪೇಕ್ಷತೆ ಹಾಗೂ ದೇಶಭಕ್ತಿಯನ್ನು ಸಂಶಯರಹಿತವಾಗಿ ರುಜುವಾತುಪಡಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.