ADVERTISEMENT

ಶುಕ್ರವಾರ, 17–6–1994

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ಸಂಬಂಧಿಗಳಲ್ಲಿ ಮಾತ್ರ ಮೂತ್ರಪಿಂಡ ಕಸಿ
ನವದೆಹಲಿ, ಜೂನ್ 16 (ಯುಎನ್ಐ)– ಭಾರತವು ಅಗ್ಗವಾಗಿ ಮೂತ್ರಪಿಂಡ ದೊರೆಯುವ ಮಾರುಕಟ್ಟೆ ಎಂದು ವಿದೇಶಿಯರು ಲೆಕ್ಕಹಾಕುವ ದಿನ ದೂರ ಹೋಗಿದೆ.

ಸಂಬಂಧಿಗಳಲ್ಲದವರ ಮೂತ್ರಪಿಂಡ ಕಸಿ ಮಾಡುವವರಿಗೆ ಐದು ವರ್ಷದವರೆಗೆ ಕಾರಾಗೃಹ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇರುವ ಮಸೂದೆಯನ್ನು ಸಂಸತ್ ಅಂಗೀಕರಿಸಿದೆ. ಇದರಿಂದಾಗಿ ವಿದೇಶಿಯರಷ್ಟೇ ಆಘಾತಗೊಂಡಿಲ್ಲ, ದೇಶದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಮೂತ್ರಪಿಂಡ ಜಾಲ ತೊಂದರೆಗೆ ಸಿಕ್ಕಿದೆ.

ಸಮೀಪದ ರಕ್ತ ಸಂಬಂಧಿಗಳು ಮತ್ತು ಗಂಡ–ಹೆಂಡತಿಯರ ಮೂತ್ರ ಪಿಂಡಗಳನ್ನು ಮಾತ್ರ ಕಸಿ ಮಾಡಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

ADVERTISEMENT

ಹಿಂದೂ ಮತ ಬ್ಯಾಂಕ್
ಭೋಪಾಲ್, ಜೂನ್ 16 (ಪಿಟಿಐ)– ವಿಶ್ವ ಹಿಂದೂ ಪರಿಷತ್ತು (ವಿಎಚ್‌ಪಿ) ಹಿಂದೂ ಮತ ಬ್ಯಾಂಕ್ ಬೆಳೆಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಂಘಟನೆಯ ಮಹಾಪ್ರಧಾನ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎಂ. ನಂಜೇಗೌಡ ಹತ್ಯೆ: 11 ಜನರ ಬಂಧನ
ಹಾಸನ, ಜೂನ್ 16– ಗಂಡಸಿ ಕ್ಷೇತ್ರದ ಮಾಜಿ ಶಾಸಕ ಎಂ. ನಂಜೇಗೌಡ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಇಂದು ದುದ್ದ ಬಳಿಯ ಚಿಕ್ಕ ಕಡಲೂರು ಗ್ರಾಮದ ಸಮೀಪ ಸಿ.ಓ.ಡಿ. ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.