ADVERTISEMENT

25 ವರ್ಷಗಳ ಹಿಂದೆ: 01 ಅಕ್ಟೋಬರ್‌ 1997

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 19:30 IST
Last Updated 30 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

l ಐಆರ್‌ಎಸ್‌–1ಡಿ ಸರಿಪಡಿಸಲು ತುರ್ತು ಕ್ರಮ

ಬೆಂಗಳೂರು, ಸೆಪ್ಟೆಂಬರ್‌ 30– ಶ್ರೀಹರಿಕೋಟದಿಂದ ಯಶಸ್ವಿಯಾಗಿ ನಿನ್ನೆ ಉಡಾವಣೆ ಯಾಗಿದ್ದ ಐಆರ್‌ಎಸ್‌–1ಡಿ ಉಪಗ್ರಹವು ನಿಗದಿತ ವೃತ್ತಾಕಾರದ ಕಕ್ಷೆಗೆ ಸೇರುವ ಬದಲು ಅಂಡಾಕಾರದ ಕಕ್ಷೆಗೆ ಸೇರಿರುವುದಕ್ಕೆ ರಾಕೆಟ್‌ನ ನಾಲ್ಕನೇ ಹಂತದಲ್ಲಿ ಉಂಟಾದ ದ್ರವ ಇಂಧನ ಕೊರತೆ ಕಾರಣ ಎಂದು ಇಸ್ರೋ ತಿಳಿಸಿದೆ.

ನಾ‌ಲ್ಕನೆ ಹಂತದಲ್ಲಿ ಇಂಧನ ಕೊರತೆ ಉಂಟಾದ ಕಾರಣ ರಾಕೆಟ್‌ನ ವೇಗ ಕಡಿಮೆಯಾಗಿ ಅಂಡಾಕಾರದ ಕಕ್ಷೆಗೆ ಸೇರಿದೆ.

ADVERTISEMENT

ಈಗ ಉದ್ಭವಿಸಿರುವ ತೊಂದೆರೆಯನ್ನು ನಿವಾರಿಸಲು ಉಪಗ್ರಹದಲ್ಲಿರುವ ಇಂಧನವನ್ನು ಎಷ್ಟು ಪ್ರಮಾಣದಲ್ಲಿ ಉರಿಸಬೇಕು ಎಂದು ಲೆಕ್ಕಾಚಾರ ಮಾಡಲಾಗಿದ್ದು, ಉಪಗ್ರಹವು ಕಕ್ಷೆಯಲ್ಲಿ 17ನೇ ಸುತ್ತು ತಿರುಗುವಾಗ ಇಂಧನವನ್ನು 5 ನಿಮಿಷಗಳ ಕಾಲ ಉರಿಸಿದರೆ ನಿಗದಿತ ಕಕ್ಷೆಗೆ ಸೇರಿಸಬಹುದು ಎಂದು ಅಂದಾಜಿಸಲಾಗಿದೆ.

l ಕಾವೇರಿ: ಬದಲಾಗದ ಕೇಂದ್ರದ ನಿಲುವು

ನವದೆಹಲಿ, ಸೆಪ್ಟೆಂಬರ್‌ 30– ಕಾವೇರಿ ಪ್ರಾಧಿಕಾರ ರಚನೆಯನ್ನು ತಮಿಳುನಾಡು ಬೆಂಬಲಿಸಿದರೆ, ಅದನ್ನು ಕರ್ನಾಟಕ ತೀವ್ರವಾಗಿ ವಿರೋಧಿಸಿ ನ್ಯಾಯಮಂಡಲಿಯ ಅಂತಿಮ ತೀರ್ಪು ಬರುವವರೆಗೆ ತಾತ್ಕಾಲಿಕವಾಗಿ ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡರೆ ಸಾಕು ಎಂಬ ತಮ್ಮ ವಾದಗಳಿಗೆ ಈ ಎರಡು ರಾಜ್ಯಗಳು ಇಂದು ಬಲವಾಗಿ ಪಟ್ಟುಹಿಡಿದವು.

ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೊಳಿಸಲು ಸಂಬಂಧಪಟ್ಟ ರಾಜ್ಯಗಳು ತಮ್ಮ ನಿಲುವಿಗೆ ಅಂಟಿಕೊಂಡರೂ ಕಾವೇರಿ ಪ್ರಾಧಿಕಾರವನ್ನು ರಚಿಸುವುದಾಗಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.