ADVERTISEMENT

25 ವರ್ಷಗಳ ಹಿಂದೆ ಶನಿವಾರ 7.12.1996

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 19:45 IST
Last Updated 6 ಡಿಸೆಂಬರ್ 2021, 19:45 IST
   

ಬಾಬ್ರಿ ಮಸೀದಿ ನಾಶ ಪ್ರತಿಧ್ವನಿ ಸಂಸತ್ತಿನಲ್ಲಿ ಕೋಲಾಹಲ

ನವದೆಹಲಿ, ಡಿ. 6– ನಾಲ್ಕು ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ ಘಟನೆ ಇಂದು ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ತೀವ್ರ ಗದ್ದಲ, ಕೂಗಾಟದ ನಡುವೆ ಲೋಕಸಭೆಯನ್ನು ಎರಡು ಬಾರಿ ಮುಂದೂಡಿದರೆ, ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಬಾಬ್ರಿ ಮಸೀದಿ ನೆಲಸಮವಾದದ್ದರ ಸ್ಮರಣೆಗೆ ಲೋಕಸಭೆಯಲ್ಲಿ ಬೆಳಿಗ್ಗೆ ಒಂದು ನಿಮಿಷ ಮೌನ ಆಚರಿಸಬೇಕೆಂಬ ಸಿಪಿಎಂ ಸದಸ್ಯ ಬಸುದೇವ ಆಚಾರ್ಯ ಅವರ ಬೇಡಿಕೆಯೊಂದಿಗೆ ಗದ್ದಲ ಆರಂಭವಾಯಿತು. ಗದ್ದಲ ಅತಿಯಾದಾಗ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಮಧ್ಯಾಹ್ನ ಮತ್ತೆ ಲೋಕಸಭೆ ಸೇರಿದಾಗ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಸದನವನ್ನು ಮುಂದೂಡಲಾಯಿತು.

ADVERTISEMENT

‘ಪಟೇಲ್‌ ಬದಲಾವಣೆ
ಆಗ್ರಹ ಸದ್ಯಕ್ಕಿಲ್ಲ’

ಬೆಂಗಳೂರು, ಡಿ. 6– ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ನಾಯಕತ್ವ ಬದಲಾವಣೆಗೆ ಒತ್ತಾಯಿಸುವ ವಿಚಾರವನ್ನು ಸದ್ಯಕ್ಕೆ ಕೈಬಿಡಲು ಭಿನ್ನಮತೀಯ ಶಾಸಕರು
ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಅವರು ಸಂಪುಟದ ಗಾತ್ರವನ್ನು ಕುಗ್ಗಿಸಿ ಸಂಪುಟ ಪುನರ್‌ ರಚನೆಯೂ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಗುರುವಾರ ರಾತ್ರಿ ನೀಡಿರುವ ಆಶ್ವಾಸನೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದ ಒಳಗಾಗಿ ಈಡೇರಿಸಲು ಭಿನ್ನಮತೀಯರು ಗಡುವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.