ADVERTISEMENT

25 ವರ್ಷಗಳ ಹಿಂದೆ: ಶನಿವಾರ 4–3–1995

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:46 IST
Last Updated 3 ಮಾರ್ಚ್ 2020, 19:46 IST

ಬೇಳೆಕಾಳುಗಳ ಮುಕ್ತ ಆಮದಿಗೆ ಅವಕಾಶ
ನವದೆಹಲಿ, ಮಾರ್ಚಿ 3:
ಆಂತರಿಕ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆ ಗಗನಕ್ಕೇರಿರುವುದರಿಂದ ಆತಂಕಗೊಂಡಿರುವ ಸರ್ಕಾರವು ಕಡಲೆ, ಉದ್ದು ಮತ್ತು ಹೆಸರುಕಾಳುಗಳ ಮುಕ್ತ ಸಾಮಾನ್ಯ ಪರವಾನಗಿ ಆಮದಿಗೆ ಅವಕಾಶ ನೀಡಲು ಆಲೋಚಿಸಿದೆ.

ಸರ್ಕಾರಿ ವಾಹನಗಳ ‘ಧೂಮಲೀಲೆ’ಗೆ ಕಡಿವಾಣ
ಹುಬ್ಬಳ್ಳಿ, ಮಾರ್ಚಿ 3:
ವಾತಾವರಣದಲ್ಲಿ ಅಪಾಯಕಾರಿ ಹೊಗೆ ಉಗುಳುವ ವಾಹನಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು. ಈ ನಿಟ್ಟಿನಲ್ಲಿ ಮೊದಲ ಕ್ರಮವಾಗಿ ತಮ್ಮ ‘ಧೂಮಲೀಲೆ’ಯಿಂದ ಪರಿಸರ ಮಾಲಿನ್ಯ ಉಂಟುಮಾಡುವ ಸರ್ಕಾರಿ ವಾಹನಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪರಿಸರ ಖಾತೆಯ ಸಚಿವ ಪಿ.ಸಿ ಸಿದ್ಧನಗೌಡರ್‌ ಇಂದು ಇಲ್ಲಿ ಹೇಳಿದರು.

‘ಕನ್ನಡ ಚಿತ್ರ ಸಬ್ಸಿಡಿಗೆ ಗುಣಮಟ್ಟದ ಮಿತಿ ಬೇಡ’
ಬೆಂಗಳೂರು, ಮಾರ್ಚಿ 3:
ರಾಜ್ಯ ಸರ್ಕಾರ ಕನ್ನಡ ಚಿತ್ರಗಳಿಗೆ ನೀಡುತ್ತಿರುವ ಸಹಾಯಧನಕ್ಕೆ ಗುಣಮಟ್ಟದ ಮಿತಿಯನ್ನು ಹಾಕಬಾರದು ಎಂದು ಚಲನಚಿತ್ರ ಉದ್ಯಮದ ಪ್ರತಿನಿಧಿಗಳು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.