ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 8 ಮೇ 1995

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:27 IST
Last Updated 7 ಮೇ 2020, 20:27 IST

ಉಳ್ಳಾಲದಲ್ಲಿ ಅಧಿಕ ಪ್ರಮಾಣದ ವಿಕಿರಣ

ಉಳ್ಳಾಲ, ಮೇ 7 (ಪಿಟಿಐ)– ಈ ಪ್ರದೇಶದಲ್ಲಿ ಅತ್ಯಧಿಕ ಪ್ರಮಾಣದ ಸ್ವಾಭಾವಿಕ ವಿಕಿರಣವಿದೆಯೆಂದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರಿಂದ, 30,000 ಜನಸಂಖ್ಯೆ ಹೊಂದಿರುವ ಮೀನುಗಾರಿಕೆಗೆ ಹೆಸರಾದ ಕರಾವಳಿ ಗ್ರಾಮ ಉಳ್ಳಾಲವು ವಿಶ್ವದ ಗಮನ ಸೆಳೆದಿದೆ.

ಅತ್ಯಧಿಕ ಸ್ವಾಭಾವಿಕ ವಿಕಿರಣ ಹೊಂದಿರುವ ವಿಶ್ವದ ಮೂರು ಸ್ಥಳಗಳ ಜೊತೆ ಈಗ ಉಳ್ಳಾಲ ನಾಲ್ಕನೇ ಮತ್ತು ದೇಶದ ಎರಡನೇ ಪ್ರದೇಶವಾಗಿ ಸೇರಿಕೊಂಡಿದೆ. ವಿಶ್ವದ ಇಂತಹ ಇತರ ಮೂರು ಪ್ರದೇಶಗಳೆಂದರೆ, ಬ್ರೆಜಿಲ್‌, ಚೀನಾದ ಕರಾವಳಿ ಗ್ರಾಮ ಹಾಗೂ ಕೇರಳದ ಕೊಲ್ಲಂ ಜಿಲ್ಲೆ.

ADVERTISEMENT

ಸರ್ಕಾರಿ ವೈದ್ಯರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ನಿಷೇಧ

ಬೆಂಗಳೂರು, ಮೇ 7– ನರ್ಸಿಂಗ್‌ ಹೋಮ್‌ಗಳನ್ನು ನಿಯಂತ್ರಿಸಲು ಕಾನೂನು, ಸರ್ಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ನಿಷೇಧ ಹಾಗೂ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಅಗತ್ಯ ಸೇವಾ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.