ಬಂಗಾಲಿ ಚಿತ್ರಕ್ಕೆ ಸ್ವರ್ಣಕಮಲ; ‘ಅಮೆರಿಕ ಅಮೆರಿಕ’ಕ್ಕೆ ಪ್ರಶಸ್ತಿ
ನವದೆಹಲಿ, ಮೇ 6 (ಪಿಟಿಐ)– ಬಂಗಾಲಿ ಚಲನಚಿತ್ರ ‘ಲಾಲ್ ದರ್ಜಾ’ಗೆ 1997ರ ಸಾಲಿನ ಸ್ವರ್ಣಕಮಲ ಪ್ರಶಸ್ತಿ ದೊರಕಿದೆ. ‘ಇಂಡಿಯನ್’ನಲ್ಲಿನ (ತಮಿಳು) ಉತ್ತಮ ಅಭಿನಯಕ್ಕಾಗಿ ಕಮಲ ಹಾಸನ್ ಅವರಿಗೆ ಶ್ರೇಷ್ಠ ನಟ ಹಾಗೂ ‘ಮಾಚಿಸ್’ನಲ್ಲಿನ (ಹಿಂದಿ) ಮರೆಯಲಾಗದ ಅಭಿನಯಕ್ಕಾಗಿ ಟಬು ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಈ ಬಾರಿ ಪ್ರಾಪ್ತವಾಗಿದೆ.
ಪ್ರಾದೇಶಿಕ ಭಾಷೆಗಳಲ್ಲಿನ ಶ್ರೇಷ್ಠ ಚಿತ್ರಗಳಿಗೆ ನೀಡುವ ಪ್ರಶಸ್ತಿಗೆ (ಕನ್ನಡದಲ್ಲಿ) ಈ ಬಾರಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕ ಅಮೆರಿಕ’ ಆಯ್ಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.