ADVERTISEMENT

25 ವರ್ಷಗಳ ಹಿಂದೆ| ಶುಕ್ರವಾರ, 19–5–1995

​ಪ್ರಜಾವಾಣಿ ವಾರ್ತೆ
Published 18 ಮೇ 2020, 22:00 IST
Last Updated 18 ಮೇ 2020, 22:00 IST

ಇನ್ನಷ್ಟು ತೆರಿಗೆ ರಿಯಾಯಿತಿಕಾಗದ, ಟಿ.ವಿ., ಔಷಧ ಅಗ್ಗ

ನವದೆಹಲಿ, ಮೇ 18 (ಪಿಟಿಐ, ಯುಎನ್‌ಐ)– ಮೂಲದಲ್ಲೇ ಮುರಿದುಕೊಳ್ಳುವ ತೆರಿಗೆಯ ಪ್ರಮಾಣದಲ್ಲಿ ಅರ್ಧದಷ್ಟು ಇಳಿತ, ಮೂಲಸೌಲಭ್ಯ ಉದ್ದಿಮೆಗಳಿಗೆ ನೀಡಲಾದ 5 ವರ್ಷಗಳ ತೆರಿಗೆ ವಿನಾಯಿತಿ ಯೋಜನೆಯಲ್ಲಿ ಬದಲಾವಣೆ ಹಾಗೂ ಇನ್ನೂ 31 ಜೀವರಕ್ಷಕ ಔಷಧಗಳಿಗೆ ಆಮದು ತೆರಿಗೆ ವಿನಾಯಿತಿ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳಲ್ಲಿ ಹಲವಾರು
ರಿಯಾಯಿತಿಗಳನ್ನು ಸರ್ಕಾರ ಇಂದು ಪ್ರಕಟಿಸಿದೆ.

ಹಣಕಾಸು ಸಚಿವ ಮನಮೋಹನ ಸಿಂಗ್‌ ಅವರು ಇಂದು ಹಣಕಾಸು ಮಸೂದೆಯನ್ನು ಚರ್ಚೆಗೆ ಮಂಡಿಸುತ್ತಾ ಇದನ್ನು ಪ್ರಕಟಿಸಿ, ಈ ರಿಯಾಯಿತಿಗಳು ಆರ್ಥಿಕರಂಗಕ್ಕೆ ಉತ್ತೇಜನ ನೀಡುವುದಲ್ಲದೆ ಕೆಲವು ನಿರ್ಣಾಯಕ ಕ್ಷೇತ್ರಗಳಿಗೆ ಪರಿಹಾರ ಒದಗಿಸುತ್ತವೆ
ಎಂದು ಹೇಳಿದರು.

ADVERTISEMENT

ಪಂಚಾಯಿತಿ ಸದಸ್ಯರ ಪಕ್ಷಾಂತರ ನಿಷೇಧ ಸುಗ್ರೀವಾಜ್ಞೆ ಕರಡು ಸಿದ್ಧ

ಬೆಂಗಳೂರು, ಮೇ 18– ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಪಕ್ಷಾಂತರ ನಿಷೇಧದ ಸುಗ್ರೀವಾಜ್ಞೆಯ ಕರಡು ಅಂತಿಮಗೊಂಡಿದ್ದು ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಅದನ್ನು ಚರ್ಚಿಸಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗು
ವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಎಂ.ಪಿ.ಪ್ರಕಾಶ್‌ ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.