ADVERTISEMENT

25 ವರ್ಷಗಳ ಹಿಂದೆ | ಗುರುವಾರ, ಜೂನ್ 8, 1995

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 18:33 IST
Last Updated 7 ಜೂನ್ 2020, 18:33 IST

ಕೃಷಿ ಪಂಪ್‌ಸೆಟ್‌ ವಿದ್ಯುತ್‌ಗೆಕನಿಷ್ಠ ದರ: ಕೇಂದ್ರ ಸೂಚನೆ
ನವದೆಹಲಿ, ಜೂನ್‌ 7–
ಕರ್ನಾಟಕ, ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ ನೀತಿಯನ್ನು ಬದಲಿಸಿ ಒಂದು ಕನಿಷ್ಠ ಪ್ರಮಾಣದ ದರವನ್ನು ವಿಧಿಸಬೇಕೆಂದು ಸಂಸತ್ತಿನ ಇಂಧನ ಸ್ಥಾಯಿ ಸಮಿತಿಯ ಶಿಫಾರಸುಗಳ ಮೇಲೆ ಸರ್ಕಾರ ಕೈಗೊಂಡಿರುವ ಕ್ರಿಯಾ ವರದಿ ತಿಳಿಸಿದೆ.

ಸಮಿತಿಯ ಈ ಶಿಫಾರಸನ್ನು ರಾಜ್ಯ ವಿದ್ಯುತ್‌ ಮಂಡಲಿಗಳು ಜಾರಿಗೆ ತಂದದ್ದೇ ಆದರೆ ಅವುಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಒಂದು ವರ್ಷಕ್ಕೆ ಸರಿಸುಮಾರು ರೂ. 1,943 ಕೋಟಿ ಆದಾಯ ಬರಲಿರುವುದಾಗಿ ಲೆಕ್ಕಾಚಾರ ಹಾಕಲಾಗಿದೆ.

ಹುಬ್ಬಳ್ಳಿ– ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್‌ 11ರಿಂದ
ಬೆಂಗಳೂರು, ಜೂನ್‌ 7–
ಹುಬ್ಬಳ್ಳಿ– ಬೆಂಗಳೂರು ನಡುವಿನ ಶರವೇಗ ಸಂಚಾರದ ಸಂಪೂರ್ಣ ಹವಾನಿಯಂತ್ರಿತ ‘ಶತಾಬ್ದಿ ಎಕ್ಸ್‌ಪ್ರೆಸ್‌’ ರೈಲು ಸಂಚಾರ ಇದೇ 11ರಿಂದ ಆರಂಭವಾಗಲಿದೆ.

ADVERTISEMENT

ಹುಬ್ಬಳ್ಳಿ– ಬೆಂಗಳೂರು ಮಧ್ಯೆದಾವಣಗೆರೆಯನ್ನು ಹೊರತುಪಡಿಸಿ ಬೇರೆಲ್ಲೂ ನಿಲ್ಲದ ಒಟ್ಟು ಏಳೂವರೆ ಗಂಟೆಯಲ್ಲಿ ಆ ಕಡೆಯಿಂದ ಬೆಂಗಳೂರನ್ನು ಅಥವಾ ಈ ಕಡೆಯಿಂದ ಹುಬ್ಬಳ್ಳಿಯನ್ನು ತಲುಪುವಂತೆ ಅದರ ಸಂಚಾರದ ವ್ಯವಸ್ಥೆಯಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.