ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 12–6–1995

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 20:46 IST
Last Updated 11 ಜೂನ್ 2020, 20:46 IST

ಬಾಂಬ್‌ ಬೆದರಿಕೆ: ಪ್ರಧಾನಿಫ್ರಾನ್ಸ್‌ ಯಾನ ವಿಳಂಬ
ನವದೆಹಲಿ, ಜೂನ್‌ 11 (ಪಿಟಿಐ)–
ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರನ್ನು ಇಂದು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್‌ಗೆ ಕರೆದೊಯ್ಯಬೇಕಾಗಿದ್ದ ಏರ್‌ ಇಂಡಿಯಾ ವಿಶೇಷ ವಿಮಾನವು ಹುಸಿ ಬಾಂಬ್‌ ಬೆದರಿಕೆಯಿಂದಾಗಿ ಮೂರು ಗಂಟೆಗಳಷ್ಟು ವಿಳಂಬವಾಗಿ ಹೊರಟಿತು.

ವಿಮಾನ ಹತ್ತಿದ್ದ ಇಡೀ ತಂಡ ಮತ್ತು ಲಗೇಜುಗಳನ್ನು ಕೂಡಲೇ ಕೆಳಗಿಳಿಸಿ ತೀವ್ರ ಪರಿಶೋಧನೆ ನಡೆಸಲಾಯಿತು.

ಶತಾಬ್ದಿ: ಜಾಗತಿಕ ದರ್ಜೆ ಲಕ್ಷುರಿ ರೈಲು
ಹುಬ್ಬಳ್ಳಿ, ಜೂನ್‌ 11
– ದೀರ್ಘ ಕಾಲದಿಂದ ನಿರೀಕ್ಷಿಸಲಾಗಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಹೊಸದಾಗಿಪರಿವರ್ತಿತವಾದ ಬ್ರಾಡ್‌ಗೇಜ್‌ ಮಾರ್ಗದಲ್ಲಿ ಹುಬ್ಬಳ್ಳಿ– ಬೆಂಗಳೂರುಮಧ್ಯೆ ಸಂಚರಿಸಲು ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಎಸ್‌. ನಿಜಲಿಂಗಪ್ಪ ಅವರು ಜೂನ್‌ 12ರಂದು ಹಸಿರುನಿಶಾನೆ ತೋರುವುದರೊಂದಿಗೆ ಕರ್ನಾಟಕದ ರಾಜಧಾನಿ ಮತ್ತು ಎರಡನೇ ರಾಜಧಾನಿ ಮಧ್ಯೆ ಜಾಗತಿಕ ದರ್ಜೆಯ ಲಕ್ಷುರಿ ರೈಲು ಸೇವೆಯ ಹೊಸ ಯುಗ ಆರಂಭವಾಗಲಿದೆ.

ADVERTISEMENT

ಹುಬ್ಬಳ್ಳಿ– ಬೆಂಗಳೂರು ಮಧ್ಯೆ ಆರಂಭಿಸಲಾಗುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಸೇವೆಯು ರಾಷ್ಟ್ರದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಾಡಿಗಳ ಸರಣಿಯಲ್ಲಿ ಒಂಬತ್ತನೆಯದಾಗಿದ್ದು, ಇಡೀ ದಕ್ಷಿಣ ಭಾರತ ಮತ್ತು ಕರ್ನಾಟಕದಲ್ಲಿ ಈ ಮಾದರಿಯ ಎರಡನೇ ರೈಲು ಸೇವೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.