ADVERTISEMENT

25 ವರ್ಷಗಳ ಹಿಂದೆ | ಬುಧವಾರ, ಜೂನ್‌ 21 1995

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:51 IST
Last Updated 21 ಜೂನ್ 2020, 15:51 IST

ವಿಎಚ್‌ಪಿಮೇಲಿನನಿಷೇಧರದ್ದು

ನವದೆಹಲಿ, ಜೂನ್‌ (ಯುಎನ್‌ಐ)– ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಕಾನೂನುಬಾಹೀರ ಸಂಘಟನೆ ಎಂದು ಘೋಷಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗಿದೆ.

ಕಾನೂನುಬಾಹೀರ ಚಟುವಟಿಕೆ(ನಿಯಂತ್ರಣ) ನ್ಯಾಯಮಂಡಳಿಯ ಅಧ್ಯಕ್ಷ ಕೆ.ರಾಮಮೂರ್ತಿ ಅವರು ಇಂದು ಹೊರಡಿಸಿದ ತಮ್ಮ ಆಜ್ಞೆಯಲ್ಲಿ ‘ಸರ್ಕಾರದ ಆದೇಶವನ್ನು ಸಂಬಂಧವಿಲ್ಲದ ವಿಷಯಗಳನ್ನು ಪರಿಗಣಿಸಿ ಹೊರಡಿಸಲಾಗಿದೆ. ಜತೆಗೆ ಅದು ದೋಷಯುಕ್ತವಾಗಿದೆ. ಅದನ್ನು ರದ್ದುಗೊಳಿಸುವಲ್ಲಿ ನನಗಾವ ಹಿಂಜರಿಕೆಯೂ ಇಲ್ಲ’ ಎಂದಿದ್ದಾರೆ.

ADVERTISEMENT

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯೂ ಆಗಿರುವ ರಾಮಮೂರ್ತಿ ಅವರು ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿ, ‘ಈ ದೇಶದ ಜನರು ಆಳುವ ಸರ್ಕಾರದಿಂದ ಇದಕ್ಕಿಂತ ಉತ್ತಮವಾದ ಪರಿಗಣನೆಗೆ ಅರ್ಹರು. ಅದನ್ನು ಪಡೆದುಕೊಂಡು ವಿಶ್ವ ರಾಷ್ಟ್ರ ಸಮುದಾಯದಲ್ಲಿ ದೇಶವನ್ನು ಪ್ರಬಲಗೊಳಿಸುವಲ್ಲಿ ಶ್ರಮಿಸುವಂತೆ ರಾಷ್ಟ್ರದ ಜನತೆಗೆ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.