ADVERTISEMENT

ಶುಕ್ರವಾರ, 15–4–1994

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:30 IST
Last Updated 14 ಏಪ್ರಿಲ್ 2019, 20:30 IST

ಚೌಡರೆಡ್ಡಿಗೆ ಗೃಹ, ರೈ–ಅಬ್ಕಾರಿ, ಖರ್ಗೆ–ಕೈಗಾರಿಕೆ, ರೇವಣ್ಣಗೆ ಕೃಷಿ
ಬೆಂಗಳೂರು, ಏ. 14– ಹದಿನಾಲ್ಕು ಮಂದಿ ಹೊಸಬರ ಸೇರ್ಪಡೆ ಮತ್ತು ಇಬ್ಬರಿಗೆ ಬಡ್ತಿ ನೀಡಿ ಇಂದು ಇಲ್ಲಿ ಸಂಪುಟ ಪುನರ‍್ರಚಿಸಿದ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ತಮ್ಮ ಹೊರೆ ಇಳಿಸಿಕೊಳ್ಳುವುದರ ಜತೆಗೆ ಖಾತೆಗಳ ಹಂಚಿಕೆಯಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ.

ಆರು ಮಂದಿ ಸಚಿವರನ್ನು ಕೈಬಿಟ್ಟು ಹೊಸದಾಗಿ ಹದಿನಾಲ್ಕು ಮಂದಿ ಸಚಿವರನ್ನು ಸೇರಿಸಿಕೊಳ್ಳುವುದರೊಡನೆ ರಾಜ್ಯ ಸಚಿವ ಸಂಪುಟದ ಗಾತ್ರ 46ಕ್ಕೇರಿತು.

**

ADVERTISEMENT

ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದು ಇಲ್ಲ
ಜಮ್ಮು, ಏ. 14 (ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ತಿದ್ದುಪಡಿಯನ್ನು ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ರಾಜ್ಯಪಾಲ ಕೆ.ವಿ. ಕೃಷ್ಣ ರಾವ್ ತಳ್ಳಿಹಾಕಿದ್ದಾರೆ.

ಡಾ. ಅಂಬೇಡ್ಕರ್ ಜನ್ಮದಿನದ ಸಂದರ್ಭದಲ್ಲಿ ಇಲ್ಲಿಯ ದಲಿತ ಸಾಹಿತ್ಯ ಅಕಾಡೆಮಿಯ ಶಿಕ್ಷಣ ಹಾಗೂ ಪ‍್ರಕಾಶನ ಕೇಂದ್ರದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕೆಲವು ರಾಜಕೀಯ ಪಕ್ಷಗಳು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿವೆ.ಆದರೆ ಪ್ರಧಾನಿ ಅವರು ಇದನ್ನು ರದ್ದುಗೊಳಿಸದಿರುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.