ADVERTISEMENT

ಬುಧವಾರ, 1-6-1994

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:00 IST
Last Updated 31 ಮೇ 2019, 20:00 IST

ಕಾರ್ನಾಡ್‌ಗೆ ಫೆಲೋಷಿಪ್, ಶಂಭು ಹೆಗಡೆಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ
ನವದೆಹಲಿ, ಮೇ 31 (ಪಿಟಿಐ)–ಗಿರೀಶ್ ಕಾರ್ನಾಡ್ (ರಂಗಭೂಮಿ), ಕೆರೆಮನೆ ಶಂಭು ಹೆಗಡೆ (ಯಕ್ಷಗಾನ), ಮೃಣಾಲಿನಿ ಸಾರಾಭಾಯ್‌ (ನೃತ್ಯ), ರಹೀಂ ಫಾಹಿಮುದ್ದೀನ್ ಡಾಗರ್ (ಹಿಂದೂಸ್ತಾನಿ ಸಂಗೀತ) ಮತ್ತು ಕುನ್ನಕುಡಿ ವೈದ್ಯನಾಥನ್ (ಕರ್ನಾಟಕ ವಾದ್ಯ ಸಂಗೀತ) ಸೇರಿದಂತೆ 27 ಪ್ರಸಿದ್ಧ ಕಲಾವಿದರು ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಮತ್ತು ಪ್ರದರ್ಶನ ಕಲೆಯ ವಿವಿಧ ಕ್ಷೇತ್ರಗಳಲ್ಲಿ ತೋರಿದ ಅಪ್ರತಿಮ ಪ್ರತಿಭೆಗೆ 1993ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಕಂಬಿ: ಕರಡು ವರದಿಗೆ ಅಂತಿಮ ರೂ‍ಪ
ಬೆಂಗಳೂರು, ಮೇ 31– ಕಾಕಂಬಿ ಮತ್ತು ಇಥೈಲ್ ಆಲ್ಕೋಹಾಲ್ ನಿಯಂತ್ರಣ ರದ್ದುಗೊಳಿಸಿದ ನಂತರ ಉದ್ಭವಿಸಿರುವ ಸಮಸ್ಯೆಗಳನ್ನು ಇಂದು ಇಲ್ಲಿ ಸೇರಿದ್ದ ಅಬ್ಕಾರಿ ಸಚಿವರುಗಳ ಸಭೆಯು ಚರ್ಚಿಸಿ, ಕರಡು ವರದಿಗೆ ಅಂತಿಮ ರೂಪ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT