ADVERTISEMENT

25 ವರ್ಷಗಳ ಹಿಂದೆ ಮಂಗಳವಾರ 29.7.1997

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 19:30 IST
Last Updated 28 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಸ್ವಾನ್ ರಾಜೀನಾಮೆಗೆ ಸಂಸತ್ತಿನಲ್ಲಿ ಆಗ್ರಹ

ನವದೆಹಲಿ, ಜುಲೈ 28 (ಪಿಟಿಐ, ಯುಎನ್ಐ)– ಇಲ್ಲಿಗೆ ಸಮೀಪದ ಫರಿದಾ ಬಾದ್‌ನಲ್ಲಿ ಕರ್ನಾಟಕ ಏಕ್ಸ್‌ಪ್ರೆಸ್ ರೈಲು ಹಿಮಸಾಗರ್ ರೈಲಿಗೆ ಡಿಕ್ಕಿ ಹೊಡೆದು ಪ್ರಯಾಣಿಕರ ಸಾವು- ನೋವಿಗೆ ಕಾರಣವಾದ ಘಟನೆ ಇಂದು ಸಂಸತ್ತಿನ ಉಭಯ ಸದನ ಗಳಲ್ಲಿ ಪ್ರಸ್ತಾಪಗೊಂಡು, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ನೈತಿಕ ಜವಾಬ್ದಾರಿ ಹೊತ್ತು ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲಿ ಪ್ರಶ್ನೋತ್ತರ ಸಮಯ ವನ್ನು ರದ್ದುಗೊಳಿಸಿ ರೈಲು ದುರಂತದ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಉದ್ರಿಕ್ತ ಸದಸ್ಯರು ಆಗ್ರಹಪಡಿಸಿದರು.

ADVERTISEMENT

ಶಾಮಿಯಾನ, ಆಹಾರ ಸರಬರಾಜಿಗೆ ಸೇವಾ ತೆರಿಗೆ ಆಗಸ್ಟ್ 1ರಿಂದ

ನವದೆಹಲಿ, ಜುಲೈ 28 (ಯುಎನ್‌ಐ)– ಕೇಂದ್ರ ಸರ್ಕಾರವು ಇನ್ನೆರಡು ಸೇವೆಗಳಿಗೆ ಸೇವಾ ತೆರಿಗೆಯನ್ನು ವಿಧಿಸಲು ತೀರ್ಮಾ ನಿಸಿದೆ. ಹೊರಗಡೆ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಮತ್ತು ಪೆಂಡಾಲ್ ಅಥವಾ ಶಾಮಿಯಾನ ಗುತ್ತಿಗೆದಾರರಿಗೆ ಈ ಸೇವಾ ತೆರಿಗೆಯನ್ನು ವಿಧಿಸಲಾಗುವುದು.

ಆಗಸ್ಟ್ 1ರಿಂದ ಈ ಸೇವಾ ತೆರಿಗೆ ಜಾರಿಗೆ ಬರಲಿದೆ. ತಮ್ಮ ಸ್ವಂತ ಸ್ಥಳ ಬಿಟ್ಟು ಬೇರೆಡೆ ಆಹಾರ ಸರಬರಾಜು ಮಾಡುವುದು, ಆಹಾರ ತಯಾರಿಸಿಕೊಡುವುದು, ಮಾದಕ ಅಥವಾ ಮಾದಕ ರಹಿತ ಪಾನೀಯ ಸರಬರಾಜು ಮಾಡುವುದು ಸೇವಾ ತೆರಿಗೆಗೆ ಒಳಪಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.