ADVERTISEMENT

25 ವರ್ಷಗಳ ಹಿಂದೆ: ಬುಧವಾರ, 04–06–1997

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:30 IST
Last Updated 3 ಜೂನ್ 2022, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ರಾಜ್ಯದ ರತ್ನಮಾಲ ಸೇರಿ ನಾಲ್ವರು ಕೇಂದ್ರ ಸಂಪುಟಕ್ಕೆ

ನವದೆಹಲಿ, ಜೂನ್‌ 3– ಪ್ರಧಾನಿ ಇಂದ್ರಕುಮಾರ್‌ ಗುಜ್ರಾಲ್‌ ಅವರು ಕರ್ನಾಟಕದ ರತ್ನಮಾಲಾ ಸವಣೂರ, ಬಿಹಾರದ ಕಮಲಾ ಸಿನ್ಹಾ, ತಮಿಳುನಾಡಿನ ಜಯಂತಿ ನಟರಾಜನ್‌ ಮತ್ತು ಆಂಧ್ರ ಪ್ರದೇಶದ ರೇಣುಕಾ ಚೌಧರಿ ಅವರನ್ನು ತೆಗದುಕೊಳ್ಳುವ ಮೂಲಕ ತಮ್ಮ ಒಂದೂವರೆ ತಿಂಗಳ ಮಂತ್ರಿ ಮಂಡಲವನ್ನು ವಿಸ್ತರಿಸಿದರು.

ಈ ವಿಸ್ತರಣೆಯಿಂದ ಅವರು ತಮ್ಮ ಸಂಪುಟದ ಗಾತ್ರವನ್ನು 44ಕ್ಕೆ ಹೆಚ್ಚಿಸಿಕೊಂಡರು. ಇದುವರೆಗೂ ಬಿಹಾರದ ಕಾಂತಿಸಿಂಗ್‌ ಏಕೈಕ ಮಹಿಳೆಯಾಗಿದ್ದರು. ಮಹಿಳೆಯರ ಸಂಖ್ಯೆ ಈಗ ಐದಕ್ಕೆ ಹೆಚ್ಚಿತು. ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಎಲ್ಲ ಮಹಿಳೆಯರಿಗೂ ಸ್ಟೇಟ್‌ ದರ್ಜೆ ಸಚಿವ ಸ್ಥಾನ ನೀಡಲಾಗಿದೆ.

ADVERTISEMENT

ಪದಕ ಬೇಟೆಯಲ್ಲಿ ಕರ್ನಾಟಕದ ಮೇಲುಗೈ

ಬೆಂಗಳೂರು, ಜೂನ್‌ 3– ಕರ್ನಾಟಕ ತಂಡ ವರು ನಾಲ್ಕನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇಂದೂ ಕೂಡಾ ತಮ್ಮ ಪದಕ ಬೇಟೆಯಲ್ಲಿ ಆಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕ ಈವರೆಗೆ ಒಟ್ಟು ಹತ್ತು ಚಿನ್ನವೂ ಸೇರಿದಂತೆ 27 ಪದಕಗಳನ್ನು ಗಳಿಸಿದೆ.

ಕರ್ನಾಟಕದ ಬಗರಾಮ್‌ ಬಿಷ್ಣೊಯ್‌ ಪುರುಷರ ವಿಭಾಗದ ಕನೋಯಿಂಗ್‌ 500 ಮೀಟರ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಕತ್ತಿವರಸೆಯ ಪುರುಷರ ವಿಭಾಗದಲ್ಲಿ ಇಂದು ಕರ್ನಾಟಕದ ಪುರುಷರು ತಂಡ ಕಂಚಿನ ಪದಕ ಗೆದ್ದರೆ. ಮಣಿಪುರ ಎರಡು ಚಿನ್ನದ ಪದಕ ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.