ADVERTISEMENT

25 ವರ್ಷಗಳ ಹಿಂದೆ: ಸಂಪುಟ ಪುನರ‍್ರಚನೆ ಚರ್ಚೆ ಅಪೂರ್ಣ

ಸೋಮವಾರ, 25 ಜನವರಿ 1999

ಪ್ರಜಾವಾಣಿ ವಿಶೇಷ
Published 24 ಜನವರಿ 2024, 19:46 IST
Last Updated 24 ಜನವರಿ 2024, 19:46 IST
   

ಸಂಪುಟ ಪುನರ‍್ರಚನೆ ಚರ್ಚೆ ಅಪೂರ್ಣ ವಿಸ್ತರಣೆಗಷ್ಟೇ ಪಟೇಲ್‌ ಸಮ್ಮತಿ

ನವದೆಹಲಿ, ಜ. 24– ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಲು ಮಾತ್ರ ನಿರ್ಧರಿಸಿದ್ದು, ಈಗಿರುವ ಮಂತ್ರಿಗಳಲ್ಲಿ ಯಾರನ್ನೂ ಕೈಬಿಡದಿರುವ ನಿಲುವಿಗೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು.

ಆದರೆ ಈ ಹಿನ್ನೆಲೆಯಲ್ಲಿ ಸಂಪುಟ ಪುನರ‍್ರಚನೆ ಬಗೆಗೆ ಇಂದು ಇಲ್ಲಿ ದಳದ ನಾಯಕರೊಡನೆ ನಡೆಸಿದ ಮಾತುಕತೆಯು ಯಾವುದೇ ಫಲ ನೀಡದ ಕಾರಣ ಸಭೆಯು ಅಪೂರ್ಣಗೊಂಡಿತು.

ADVERTISEMENT

ಕರ್ನಾಟಕ ಮಂತ್ರಿಮಂಡಲ ವಿಸ್ತರಣೆ ಕುರಿತು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌, ದಳದ ನಾಯಕರಾದ ಎಚ್‌.ಡಿ. ದೇವೇಗೌಡ, ಎಸ್‌.ಆರ್‌. ಬೊಮ್ಮಾಯಿ ಮತ್ತು ದಳ ರಾಜ್ಯ ಘಟಕದ ಅಧ್ಯಕ್ಷ ಸಿದ್ದರಾಮಯ್ಯ ಅವರೊಡನೆ ನಡೆಸಿದ ಮಾತುಕತೆಯು ಯಾವುದೇ ಪ್ರತಿಫಲ ನೀಡಿಲ್ಲವಾದ ಕಾರಣ, ಬೆಂಗಳೂರಿನಲ್ಲಿ ಮತ್ತೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಿದರು.

ಈ ತಿಂಗಳ 12ರಂದು ರಾಜಕೀಯ ವ್ಯವಹಾರಗಳ ಸಮಿತಿಯು ಬಿಕ್ಕಟ್ಟಿನ ಬಗ್ಗೆ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸಲಹೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.