ADVERTISEMENT

25 ವರ್ಷಗಳ ಹಿಂದೆ: ಗುರುವಾರ 30.1.1997

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:31 IST
Last Updated 29 ಜನವರಿ 2022, 19:31 IST
   

ಆಲಮಟ್ಟಿ ಕಾಮಗಾರಿ ನಿಲ್ಲದು– ಜೆ.ಎಚ್. ಪಟೇಲ್

ನವದೆಹಲಿ, ಜ. 29– ಆಲಮಟ್ಟಿ ಅಣೆಕಟ್ಟು ಎತ್ತರದ ವಿವಾದ ಕುರಿತಂತೆ ಸಂಯುಕ್ತ ರಂಗದ ನಾಲ್ವರು ಮುಖ್ಯಮಂತ್ರಿಗಳು ನೇಮಕ ಮಾಡಿರುವ ತಜ್ಞರ ಸಮಿತಿಗೆ ಯಾವುದೇ ರೀತಿಯ ಶಾಸನಬದ್ಧ ಪಾವಿತ್ರ್ಯತೆ ಇಲ್ಲದಿರುವು ದರಿಂದ ಅದನ್ನು ಯಾವುದೇ ರಾಜ್ಯವು ಕಡ್ಡಾಯವಾಗಿ ಪಾಲಿಸಬೇಕಾದ ಅವಶ್ಯಕತೆಯೂ ಕಂಡು ಬರುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಇಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ರಾಜ್ಯವು ಬಚಾವತ್ ಆಯೋಗದ ವರದಿಯನ್ನು ಉಲ್ಲಂಘಿಸಿಲ್ಲ. ಹಾಗಾಗಿ ಆಲಮಟ್ಟಿ ಅಣೆಕಟ್ಟು ಕಾಮಗಾರಿ ಮುಂದುವರಿಸಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.