ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 4.2.1996

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 17:32 IST
Last Updated 3 ಫೆಬ್ರುವರಿ 2021, 17:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜಲನೀತಿ: ಕೇಂದ್ರ ಸೂತ್ರಕ್ಕೆ ತಮಿಳುನಾಡು ತಿರಸ್ಕಾರ

ಮದ್ರಾಸ್, ಫೆ. 3 (ಪಿಟಿಐ)– ರಾಷ್ಟ್ರೀಯ ಜಲನೀತಿ ರೂಪಿಸುವ ಸಲುವಾಗಿ ಕೇಂದ್ರ ಜಲ ಆಯೋಗವು ಕಳುಹಿಸಿರುವ ಕರಡು ಮಾರ್ಗದರ್ಶಿ ಸೂತ್ರಗಳನ್ನು ತಮಿಳುನಾಡು ತಿರಸ್ಕರಿಸಿದೆ. ನದೀತೀರದ ರಾಜ್ಯಗಳ ಹಕ್ಕನ್ನು ನಿರಾಕರಿಸಬಾರದು ಎಂದು ಆಗ್ರಹಪಡಿಸಿದೆ.

ರಾಷ್ಟ್ರೀಯ ಜಲನೀತಿಗೆ ಮಾರ್ಗದರ್ಶಿ ಸೂತ್ರಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ಕೈಬಿಡುವಂತೆ ಜಯಲಲಿತಾ ಅವರು ಇಂದು ಕರೆದಿದ್ದ ಸರ್ವಪಕ್ಷ ಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.

ADVERTISEMENT

ನಾಣಯ್ಯ ಸಮಿತಿ ಶಿಫಾರಸಿಗೆ ಸರ್ವಪಕ್ಷ ಒಪ್ಪಿಗೆ

ಬೆಂಗಳೂರು, ಫೆ. 3– ಭೂಮಿಯ ಗುಣ, ಆಯಾ ಪ್ರದೇಶದಲ್ಲಿ ಕಾಲಕಾಲಕ್ಕೆ ಎದುರಾಗುವ ಬರಗಾಲದ ಪರಿಸ್ಥಿತಿ, ಕೃಷಿಕ್ಷೇತ್ರ ಮತ್ತು ಬೆಳೆ ಸ್ಥಿತಿ, ಆರ್ಥಿಕ ಹಿನ್ನಡೆಯಂಥ ಅಂಶಗಳನ್ನು ರಾಷ್ಟ್ರೀಯ ಜಲನೀತಿಯನ್ನು ಸಿದ್ಧಪಡಿಸುವಾಗ ಗಂಭೀರವಾಗಿ ಪರಿಗಣಿಸಬೇಕು ಎಂಬ ಸಲಹೆಯನ್ನು ಕರ್ನಾಟಕ ಮಾಡಿದೆ.

ದೇವನೂರ, ಗೀತಾ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು, ಫೆ. 3– ಲೇಖಕ ದೇವನೂರ ಮಹಾದೇವ, ಭಾಷಾ ವಿಜ್ಞಾನದ ಪ್ರಾಧ್ಯಾಪಕ ಡಾ. ಎಚ್.ಎಸ್.ಬಿಳಿಗಿರಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ–ಕನ್ನಡ ನಿಘಂಟಿನ ಪ್ರಧಾನ ಸಂಪಾದಕ ಪ್ರೊ. ಎನ್.ಬಸವಾರಾಧ್ಯ, ಲೇಖಕಿ ಗೀತಾ ನಾಗಭೂಷಣ ಹಾಗೂ ಕವಿ, ವಿಮರ್ಶಕ, ನಾಟಕಕಾರ, ಅನುವಾದಕ ಬಿ.ಎ. ಸನದಿ ಅವರಿಗೆ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪುರಸ್ಕರಿಸಿ ಕನ್ನಡ ಸಾಹಿತ್ಯ ಅಕಾಡೆಮಿ 1995ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.

ಕನ್ನಡ ಸಾಹಿತ್ಯದ 16 ಪ್ರಕಾರಗಳ ಒಟ್ಟು 18 ಲೇಖಕರ ಉತ್ತಮ ಕೃತಿಗಳಿಗಾಗಿ 1994ನೇ ಸಾಲಿನ ಪ್ರಶಸ್ತಿಗಳನ್ನು ಕೂಡ ಅಕಾಡೆಮಿ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.