
ಸೊಳ್ಳೆ ಕಡಿತ, ಕಪ್ಪಾದ ಬಣ್ಣ, ಸ್ವಲ್ಪ ಆಯಾಸ
ಬೆಂಗಳೂರು, ನ. 17– ‘ಡಾ. ರಾಜ್ ಕುಮಾರ್ ಅವರ ಮೈಮೇಲೆ ಸೊಳ್ಳೆ ಮತ್ತಿತರ ಕೀಟಗಳು ಕಚ್ಚಿರುವುದು ಬಿಟ್ಟರೆ ಉಳಿದಂತೆ ಅವರು ಪೂರ್ಣ ಆರೋಗ್ಯದಿಂದಿದ್ದಾರೆ’ ಎಂದು ರಾಜ್ ಕುಟುಂಬದ ವೈದ್ಯ ಡಾ. ರಮಣರಾವ್ ಇಂದು ಇಲ್ಲಿ ಹೇಳಿದರು.
ರಾಜ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅವರಿಗೆ ಸ್ವಲ್ಪ ಪ್ರಮಾಣದ ಆಯಾಸ ವಾಗಿದೆಯಷ್ಟೆ. ಅವರು ಮಾನಸಿಕ ಸ್ಥೈರ್ಯ ಕಳೆದುಕೊಂಡಿಲ್ಲ. ರಕ್ತದ ಒತ್ತಡ ಮಾಮೂಲಿನಂತಿದೆ. ಈಗ ಮಂಡಿನೋವಿನ ಬಾಧೆಯೂ ಇಲ್ಲ. ಪ್ರತಿದಿನ ಯೋಗಾಭ್ಯಾಸ ಮಾಡುತ್ತಿರುವುದರಿಂದ ಮಂಡಿನೋವು ನಿವಾರಣೆಯಾಗಿದೆ’ ಎಂದರು.
ಡಿಸಿಗೆ ವಾಗ್ದಂಡನೆ ನಿರ್ಧಾರ
ಬೆಂಗಳೂರು, ನ. 17– ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಸಮಿತಿಯ ಸಭೆಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಆಹ್ವಾನಿಸದಿದ್ದಕ್ಕಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎಚ್. ಗೋಪಾಲಕೃಷ್ಣಗೌಡ ಅವರಿಗೆ ವಾಗ್ದಂಡನೆ ವಿಧಿಸಲು ನಿರ್ಧರಿಸಿದ ಪರಿಷತ್ತು, ನವೆಂಬರ್ 21ರಂದು ಸಭೆಗೆ ಹಾಜರಾಗಬೇಕೆಂದು ಅವರಿಗೆ ಆದೇಶಿಸಿತು.
ವಿಧಾನ ಪರಿಷತ್ತಿನ ಸದಸ್ಯರನ್ನು ಎರಡನೇ ದರ್ಜೆ ಸದಸ್ಯರಂತೆ ಕಾಣುವ ಅಧಿಕಾರಿಗಳ ಪ್ರವೃತ್ತಿಗೆ ತಡೆ ಹಾಕಲು, ಅವರಿಗೆ ವಾಗ್ದಂಡನೆ ವಿಧಿಸಲು ನಿರ್ಣಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.