ADVERTISEMENT

25 ವರ್ಷಗಳ ಹಿಂದೆ: ಪರ್ಯಾಯ ಭದ್ರಾ ಯೋಜನೆಗೆ ಹೋರಾಟ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 22:37 IST
Last Updated 6 ಫೆಬ್ರುವರಿ 2024, 22:37 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಫೆ. 18ರಿಂದ ದೆಹಲಿಯಲ್ಲಿ ಭಾರತ –ಪಾಕಿಸ್ತಾನ ಮರು ಮಾತುಕತೆ

ಇಸ್ಲಾಮಾಬಾದ್‌, ಫೆ. 6 (ಎಎಫ್‌ಪಿ)–ನವದೆಹಲಿಯಲ್ಲಿ ಇದೇ ತಿಂಗಳ 18ರಂದು ಭಾರತದ ಜತೆ ಮತ್ತೆ ಮಾತುಕತೆ ಆರಂಭಿಸಲು ಪಾಕಿಸ್ತಾನ ಇಂದು ಒಪ್ಪಿಗೆ ನೀಡಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಕೆ. ರಘುನಾಥ್‌ ಅವರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಶಂಸದ್‌ ಅಹಮದ್‌ ಅವರು 17ರಂದು ನವದೆಹಲಿ ತಲುಪಲಿದ್ದಾರೆ. ಮೂರು ದಿನಗಳ ಮಾತುಕತೆಯು ಶಾಂತಿ ಮತ್ತು ಭದ್ರತೆಯನ್ನು ಕುರಿತದ್ದಾಗಿದೆ. ಅಲ್ಲದೆ, ಮಾತುಕತೆಯಲ್ಲಿ ಪರಸ್ಪರ ವಿಶ್ವಾಸ ಮೂಡಿಸುವುದು ಹಾಗೂ ಕಾಶ್ಮೀರದ ಪ‍್ರಶ್ನೆ ಕೂಡ ಬರುತ್ತವೆ ಎಂದು ಹೇಳಲಾಗಿದೆ.

ADVERTISEMENT

ಪರ್ಯಾಯ ಭದ್ರಾ ಯೋಜನೆಗೆ ಹೋರಾಟ: ಎಚ್ಚರಿಕೆ

ಬೆಂಗಳೂರು, ಫೆ. 6– ಪರ್ಯಾಯ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೈಗೆತ್ತಿ
ಕೊಳ್ಳುವ ಬಗ್ಗೆ ಈ ತಿಂಗಳ ಒಳಗೆ ಸರ್ಕಾರ ಖಚಿತ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ‘ಚಿತ್ರದುರ್ಗ ಜಿಲ್ಲಾ ನೀರಾವರಿ ಹಾಗೂ ಸಂಪನ್ಮೂಲ ಅಭಿವೃದ್ಧಿ ಹೋರಾಟ ಸಮಿತಿ’ ಇಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರು ಒದಗಿಸುವ ಈ ಯೋಜನೆಯ ಜಾರಿಗೆ ಒತ್ತಾಯಿಸಲು ಹೋರಾಟ ಕಾರ್ಯಕ್ರಮ
ಗಳನ್ನು ರೂಪಿಸಲು ಇಲ್ಲಿ ಸೇರಿದ್ದ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.