ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನೂಕುನುಗ್ಗಲು
ಬೀದರ್, ಜು. 19– ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಎಐಸಿಸಿ ವೀಕ್ಷಕರಿಗೆ ಅರ್ಜಿ ಸಲ್ಲಿಸುವುದಕ್ಕೆ ಇಂದು ಇಲ್ಲಿ ಕೆಲ ಕಾಲ ನೂಕುನುಗ್ಗಲು ನಡೆಯಿತು.
ಮಲ್ಲೇಶ್ವರ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಜ್ರ, ಚಿನ್ನ ಡಕಾಯಿತಿ
ಬೆಂಗಳೂರು, ಜುಲೈ 19– ಸಿಬಿಐ ಅಧಿಕಾರಿಗಳ ಸೋಗು ಹಾಕಿಕೊಂಡು ಆಭರಣ ಅಂಗಡಿಗೆ ನುಗ್ಗಿದ ಡಕಾಯಿತರ ತಂಡವೊಂದು ಅಂಗಡಿಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ, ಕಟ್ಟಿ ಹಾಕಿ, 30–40 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣ ದೋಚಿಕೊಂಡು ಹೋಗಿರುವ ಘಟನೆ ಹಾಡಹಗಲೇ ನಗರದಲ್ಲಿ ನಡೆದಿದೆ.
ಮಲ್ಲೇಶ್ವರ ಬಡಾವಣೆಯಲ್ಲಿನ ಮಾರ್ಗೋಸಾ ರಸ್ತೆಯ ಗುರುನಾಥ ಆ್ಯಂಡ್ ಸನ್ಸ್ ಜ್ಯೂವೆಲರಿ ಹಾಗೂ ವಜ್ರದ ಆಭರಣ ಅಂಗಡಿಯಲ್ಲಿ ಈ ಡಕಾಯಿತಿ ಇಂದು ಸಂಜೆ ನಡೆದಿದೆ.
ಪರಿಹಾರ ಕಾಣದ ದಳ ಬಿಕ್ಕಟ್ಟು: ಉಭಯ ಬಣಗಳ ಪ್ರತ್ಯೇಕ ಸಭೆ
ನವದೆಹಲಿ, ಜುಲೈ 19– ಜನತಾದಳವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಜತೆ ಸೇರಬೇಕೆನ್ನುವ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಗುಂಪಿನ ನಿಲುವು ಬಹುತೇಕವಾಗಿ ದಳದ ವಿಭಜನೆಗೆ ಎಡೆ ಮಾಡಿಕೊಟ್ಟಿದ್ದು, ಈಗ ಉದ್ಭವಿಸಿರುವ ಬಿಕ್ಕಟ್ಟು, ಯಾವುದೇ ಪರಿಹಾರ ಕಾಣದೆ ಮತ್ತಷ್ಟುಕಗ್ಗಂಟಾಗಿದೆ.
ಜನತಾದಳ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು, ಈ ವಿವಾದದ ಬಗೆಗೆ ವಿವಿಧ ಪಕ್ಷಗಳ ನಾಯಕರ ಜತೆ ನಡೆಸಿದ ಮಾತುಕತೆ ಅಪೂರ್ಣಗೊಂಡಿರುವುದರಿಂದ ಇಂದು ನಡೆಯಬೇಕಾದ್ದ ದಳದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಮುಂದಕ್ಕೆ ಹೋಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.