‘ಅಖಂಡ ಕರ್ನಾಟಕ ಒಡೆಯದಿರಲಿ’
ಬಾಗಲಕೋಟೆ, (ಸತ್ಯಕಾಮ ವೇದಿಕೆ), ಜೂನ್ 24– ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಮತ್ತು ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯ ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ 68ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶಾಂತಾದೇವಿ ಮಾಳವಾಡ ಇಂದಿಲ್ಲಿ ಆಗ್ರಹಪಡಿಸಿದರು.
ಪ್ರಾದೇಶಿಕ ಅಸಮಾನತೆಯ ಪರಿಣಾಮವಾಗಿ ಭುಗಿಲೆದ್ದಿರುವ ಪ್ರತ್ಯೇಕ ರಾಜ್ಯದ ಕೂಗನ್ನು ಈ ಮೂಲಕ ಕೊನೆಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
‘ಅಖಂಡ ಕರ್ನಾಟಕ ಎಂದಿಗೂ ಒಡೆದು ಹೋಗದಂತೆ ಸರ್ಕಾರ ರಾಜ್ಯದ ಎಲ್ಲ ಪ್ರದೇಶಗಳ ಅಭಿವೃದ್ಧಿಯನ್ನು ಸಮ ಪ್ರಮಾಣದಲ್ಲಿ ಸಾಧಿಸಬೇಕು’ ಎಂದು ಹೇಳಿದರು.
‘ರಾಜ್ಯ ನಿರ್ಮಾಣಗೊಂಡು ನಾಲ್ಕು ದಶಕಗಳು ಕಳೆದಿದ್ದರೂ ಎಲ್ಲ ಭಾಗಗಳ ಸಮಾನ ಅಭಿವೃದ್ಧಿ ಆಗದಿರುವುದು ಅತ್ಯಂತ ಖೇದಕರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.